ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಪ್ರಿಯಾಂಕಾ ಚೋಪ್ರಾ ಇದ್ದಕ್ಕಿಂತೆಯೇ ಬಾಲಿವುಡ್‌ನಲ್ಲಿ ರಾಜಕೀಯ ಇದೆ, ಅವಕಾಶ ಕಿತ್ತುಕೊಂಡ್ರು ಅದಕ್ಕೆ ಬಾಲಿವುಡ್ ಬಿಟ್ಟೆ ಎಂದು ಹೇಳಿ ಬಾಂಬ್ ಸಿಡಿಸಿದ್ದರು.
ಈ ಬಗ್ಗೆ ಕಂಗನಾ ಮಾತನಾಡಿದ್ದು, ಇದಕ್ಕೆಲ್ಲಾ ಕರಣ್ ಕಾರಣ ಎಂದು ಹೇಳಿ ಸುದ್ದಿಯಾಗಿದ್ರು. ಪ್ರಿಯಾಂಕಾ ಬಾಯ್ಬಿಟ್ಟು ಹೇಳ್ತಿಲ್ಲ, ರಾಜಕೀಯ ಮಾಡ್ತಿರೋದು ಕರಣ್ ಜೋಹರ್, ಅವರಿಂದಾಗೇ ಬಾಲಿವುಡ್ ಬಿಟ್ಟರು ಎಂದು ಕಂಗನಾ ಹೇಳಿಕೊಂಡಿದ್ದರು.
ಆದರೆ ಇದೀಗ ಕರಣ್ ಹಾಗೂ ಪ್ರಿಯಾಂಕ ಎದುರಾಗಿದ್ದು, ಪ್ರೀತಿಯಿಂದ ತಬ್ಬಿಕೊಂಡಿದ್ದಾರೆ. ಹಾಗೆ ಪ್ರಿಯಾಂಕಾ ನಗುತ್ತಾ ಮಾತನಾಡುತ್ತಿರು ವಿಡಿಯೋ ವೈರಲ್ ಆಗಿದೆ. ಯಾರಾದರೂ ಕಂಗನಾರನ್ನು ಕರೆದು ಇದನ್ನು ತೋರಿಸಿ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/Cqei024DCtm/?utm_source=ig_web_copy_link