CINE | ಅಶ್ಲೀಲ ಮೆಸೇಜ್‌ಗೆ ಬೇಸತ್ತು ಸಾವಿರ ಅಕೌಂಟ್‌ ಬ್ಲಾಕ್‌ ಮಾಡಿದ ಕನ್ನಡದ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಜ್ಯೋತಿ ರೈ  ಸದ್ಯ ಕಾಲಿವುಡ್  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಶ್ಲೀಲ ಮೆಸೇಜ್ ಮಾಡುವವರಿಗೆ ನಟಿ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಟ್ಟ ಸಂದೇಶ ಕಳುಹಿಸುತ್ತಿದ್ದ 1 ಸಾವಿರ ಅಕೌಂಟ್ ಅನ್ನು ನಟಿ ಬ್ಲಾಕ್ ಮಾಡುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಇನ್ಸ್ಟಾಗ್ರಾಂ ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದು ಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ.

ಪಾಸಿಟಿವ್ ಆಗಿ ಪರಿಸರವನ್ನು ರಚನೆ ಮಾಡಲು ನೀವು ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ ಎಂದಿದ್ದಾರೆ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!