ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡಿದ ಇತ್ತೀಚಿನ ಕನ್ನಡದ ಚಲನಚಿತ್ರ ʼಕಾಂತಾರʼ ಶತದಿನೋತ್ಸವಗಳನ್ನು ಪೂರೈಸಿದೆ.
ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಅವರ ಖ್ಯಾತಿ ಹೆಚ್ಚಾಗಿದೆ. ‘ಕಾಂತಾರ’ ಚಿತ್ರದ ಶತದಿನೋತ್ಸವ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಬಂಟರ ಸಂಘದಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಅವರು ʼಕಾಂತಾರ ಭಾಗ 2ʼ ಯಾವಾಗ ಎನ್ನುವ ಪ್ರಶ್ನೆಗೆ ಮುಂದೆ ಬರೋದು ಈ ಚಿತ್ರದ ಮೊದಲ ಭಾಗ’ ಎಂದು ಹೇಳಿ ಪ್ರೇಕ್ಷಕರಿಗೆ ಆಶ್ಚರ್ಯಚಕಿತಗೊಳಿಸಿದ್ದಾರೆ.