ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಈಗಾಗಲೇ ಸಾಕಷ್ಟಯ ಯಶಸ್ಸು ಪಡೆದಿದ್ದು, ಎರಡು ರಾಷ್ಟ್ರಪ್ರಶಸ್ತಿ ಗೆದ್ದಿದೆ.
ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಢಾಕಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ನಂತರ ಇದೀಗ ಮೆಕ್ಸಿಕೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಆರ್‌ಆರ್‌ಆರ್, ಬಾಜಿರಾವ್ ಮಸ್ತಾನಿ, ಸೂರರೈ ಪೊಟ್ರು, ತಾನಾಜಿ ಸಿನಿಮಾಗಳ ಜೊತೆ ಕನ್ನಡದ ಡೊಳ್ಳು ಸಿನಿಮಾ ಪ್ರದರ್ಶನ ಕಾಣಲಿದೆ. ಡೊಳ್ಳು ಕುಣಿತ ಹಾಗೂ ಜಾನಪದ ಸೊಗಡನ್ನು ಬಣ್ಣಿಸುವ ಸಿನಿಮಾ ಇದಾಗಿದ್ದು, ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಹಾಗೂ ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿದ್ದಾರೆ.