ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹುಟ್ಟುಹಬ್ಬದಂದು ‘ರಾನಿ’ ಟೀಸರ್ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿರುತೆರೆಯಲ್ಲಿ ಹೆಚ್ಚು ಮನ್ನಣೆ ಪಡೆದ ಧಾರಾವಾಹಿ ʼಕನ್ನಡತಿʼಯ ನಟ ಕಿರಣ್ ರಾಜ್​ ಹಿರಿತೆರೆಯಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಕಿರಣ್‌ ರಾಜ್‌ ನಟನೆಯ ‘ರಾನಿ’ ಸಿನಿಮಾ ಹಲವು ಕಾರಣಗಳಿಂದಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಟೀಸರ್‌ ಜುಲೈ 5ರಂದು ಅಂದರೆ ಕಿರಣ್‌ ರಾಜ್‌ ರವರ ಜನ್ಮದಿನದಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಈ ಸಿನಿಮಾದಲ್ಲಿ ಕಿರಣ್​ ರಾಜ್​ ಅವರ ಗೆಟಪ್​ ಗಮನ ಸೆಳೆಯುತ್ತಿವೆ. ತುಂಬಾ ಮಾಸ್​ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾಗೆ ಗುರುತೇಜ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ರವಿಶಂಕರ್, ಉಗ್ರಂ ರವಿ, ಮೈಕೋ ನಾಗರಾಜ್, ಬಿ. ಸುರೇಶ, ಉಗ್ರಂ ಮಂಜು, ಮಂಡ್ಯ ರಮೇಶ್, ಸೂರ್ಯ ಕುಂದಾಪುರ, ಸುಜಯ್ ಶಾಸ್ತ್ರಿ, ಗಿರೀಶ್ ಹೆಗ್ಡೆ, ಧರ್ಮಣ್ಣ ಕಡೂರು ಸೇರಿದಂತೆ ಹಲವಾರು ನಟರು ಕಾಣಿಸಿಕೊಂಡಿದ್ದಾರೆ. ಸಮೀಕ್ಷಾ, ಅಪೂರ್ವಾ, ರಾಧ್ಯಾ ಅವರು ಈ ಚಿತ್ರದ ಮೂವರು ನಾಯಕಿಯರು.

ಇದೇ ವರ್ಷ ಡಿಸೆಂಬರ್​ ತಿಂಗಳಲ್ಲಿ ‘ರಾನಿ’ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ರಾಘವೇಂದ್ರ ಬಿ. ಕೋಲಾರ್ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೆಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸಚಿನ್ ಬಸ್ರೂರ್ ಅವರು ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ‘ಸ್ಟಾರ್ ಕ್ರಿಯೇಷನ್’ ಬ್ಯಾನರ್ ಮೂಲಕ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಅವರು ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!