ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರ ಮೇಲೆ ನಿರ್ಮಾಪಕರ ಸಂಘ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ನಿರ್ಮಾಪಕರ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ .
ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿರುವ ಚಂದ್ರಚೂಡ್ ಅವರು ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡಿದ್ದರು. ಆ ವಿಡಿಯೋದಲ್ಲಿ ಅವರು ನಿರ್ಮಾಪಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಏನಿದೆ?
“ಚಂದ್ರಚೂಡ ಅಲಿಯಾಸ್ ಚಕ್ರವರ್ತಿ ಚಂದ್ರಚೂಡ್” ಎಂಬ ವ್ಯಕ್ತಿ ಕನ್ನಡ ಚಲನಚಿತ್ರ ನಿರ್ಮಾಪಕರ ಕುರಿತು ಅತ್ಯಂತ ಅಸಭ್ಯ, ಅವಾಚ್ಯ, ಅವಮಾನಕಾರಕ ಮತ್ತು ಮಾನಹಾನಿಕರ ಪದಗಳನ್ನು ಬಳಸಿರುತ್ತಾರೆ. ಕನ್ನಡದ ನಟ ಸಾರ್ವಭೌಮ ದಿವಂಗತ ಡಾ॥ ರಾಜ್ ಕುಮಾರ್‌ರವರು ಕನ್ನಡದ ನಿರ್ಮಾಪಕರನ್ನು “ಅನ್ನದಾತರು” ಎಂದು ಸಂಭೋದಿಸಿದ್ದರು. ಆದರೆ ಈ ವ್ಯಕ್ತಿಯು ನಿರ್ಮಾಪಕರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಒಳಗೊಂಡಂತೆ ಅಸಭ್ಯ ಮತ್ತು ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನ್ನ ಯೂಟ್ಯೂಬ್ ಚಾನೆಲ್‌ನ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ನಿರ್ಮಾಪಕರ ಬಗ್ಗೆ ಆಗೌರವ ತರುವ ಹೇಳಿಕೆಗಳನ್ನು ನೀಡಿದ್ದು, ʻಕೆಲ ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋಡ್ ನೋಡ್ಕೋತ್ತಾರೆ. ಕಾಂಡೋಮ್ ಬೇಕಾದ್ರೂ ತಗೊಂಡು ಹೋಗ್ ಬಿಡ್ತಾರೆ ಕೆಲವು ನಿರ್ಮಾಪಕರು ಹೀರೋ ಹತ್ತಿರʼ ಎಂಬಂತಹ ಅಶ್ಲೀಲ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ನೀಡಿದ್ದಾರೆ. ಈ ಹೇಳಿಕೆಗಳು ಸಂಪೂರ್ಣ ಕನ್ನಡ ಚಲನಚಿತ್ರ ನಿರ್ಮಾಪಕರ ಘನತೆ, ಗೌರವ ಮತ್ತು ಮಾನಕ್ಕೆ ಗಂಭೀರ ಹಾನಿ ಉಂಟುಮಾಡಿವೆ. ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋವನ್ನು ಪೆನ್ ಡ್ರೈವ್ ಮೂಲಕ ಸಾಕ್ಷಿಯಾಗಿ ಒದಗಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಸಮಾಜದಲ್ಲಿ ನಿರ್ಮಾಪಕರ ಬಗ್ಗೆ ತಪ್ಪು ಕಲ್ಪನೆ, ದ್ವೇಷ ಮತ್ತು ಅವಿಶ್ವಾಸ ಮೂಡಿಸುವ ಉದ್ದೇಶದಿಂದ ಮಾತನಾಡಿರುತ್ತಾರೆ. ಯೂಟ್ಯೂಬ್ ದುರುಪಯೋಗಪಡಿಸಿಕೊಂಡು ಅಶ್ಲೀಲ ಮತ್ತು ಕಾನೂನು ವಿರೋಧಿ ವಿಷಯವನ್ನು ಪ್ರಸಾರ ಡಿಜಿಟಲ್ ಮಾದ್ಯಮವನ್ನು ಮಾಡಲಾಗಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಘನತೆಗೆ ಮತ್ತು ಮೌಲ್ಯಗಳಿಗೆ ಸಮಾಜದಲ್ಲಿ ಬೆಲೆ ಇಲ್ಲದಂತೆ ಇನ್ನೂ ಅನೇಕ ಅವ್ಯಾದ ಶಬ್ದಗಳಲ್ಲಿ ಮಾತನಾಡಿರುತ್ತಾರೆ. ಇದರ ಬಗ್ಗೆ ಸಂಘಕ್ಕೆ ಅನೇಕ ನಿರ್ಮಾಪಕರು ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯವರು ದೂರನ್ನು ನೀಡಿದೆ.
ಮಹಿಳೆಯರ ಗೌರವಕ್ಕೆ ಧಕ್ಕೆ ಹಾಗೂ IT Act ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ (FIR) ದಾಖಲಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ದೂರಿನಲ್ಲಿ ತಿಳಿಸಿದೆ .
ಸ್ಪಷ್ಟನೆ ನೀಡರುವ ಚಂದ್ರಚೂಡ್
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ಚಕ್ರವರ್ತಿ ಚಂದ್ರಚೂಡ್, “ನಾನು ಮಾತನಾಡಿರುವುದು ತಮಿಳು ಸಿನಿಮಾ ಬಗ್ಗೆ, ಅಲ್ಲಿಯ ವಾತಾವರಣದ ಬಗ್ಗೆ, ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಆಗಲಿ ಕನ್ನಡ ಚಿತ್ರರಂಗದ ಬಗ್ಗೆ ಅಲ್ಲವೇ ಅಲ್ಲ. ಅಲ್ಲದೆ ಕಮೋಡ್ ಟು ಕಾಂಡೋಮ್ ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲೂ ಸಹ ದನಿ ಎತ್ತಿದ್ದೇನೆ” ಎಂದಿದ್ದಾರೆ.



