ಕನ್ನಡಕ್ಕೆ‌ ಅಪಮಾನವಾದರೆ ಕನ್ನಡಿಗರು ಸಹಿಸಲ್ಲ: ಕಮಲ್ ವಿರುದ್ಧ ಘರ್ಜಿಸಿದ ಸುಮಲತಾ ಅಂಬರೀಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಹೇಳಿರುವ ಹೇಳಿಕೆಗೆ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹಿರಿಯ ನಟ ನಟಿಯರು ತಮಿಳಿನ ನಟನ ಮಾತನ್ನು ಖಂಡಿಸಿದ್ದಾರೆ.

ಇದೀಗ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ನಟಿ ಸುಮಲತಾ ಅಂಬರೀಷ್ ಅವರು ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎಂದು ಹೇಳಿದ್ದಾರೆ.

ಕನ್ನಡದ ಭಾಷೆಗೆ ಅದರದ್ದೆ ಆದ ಘನತೆ ಇದೆ. ಅಪಮಾನ ಮಾಡೋದು ಸರಿಯಲ್ಲ. ಹೇಳಿಕೆ‌ ನೀಡೋವಾಗ ಎಚ್ಚರಿಕೆ‌ಯಿಂದ ನೀಡಬೇಕು. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಅನ್ನೊದು ಯಾರಿಗೂ ತಿಳಿದಿಲ್ಲ. ಕನ್ನಡಕ್ಕೆ‌ ಅಪಮಾನವಾದರೆ ಕನ್ನಡಿಗರು ಸಹಿಸಲ್ಲ. ರಾಜಕಾರಣಿಗಳು‌ ಈ ಬಗ್ಗೆ ಮಾತನಾಡಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!