ಕಾಂತಾರ 2 ಸಿನಿಮಾ ಬರುತ್ತಾ? ಈ ಕುರಿತು ರಿಷಬ್ ಅಲ್ಲ ಈ ನಟ ಹೇಳಿದ್ದಾರೆ ಸೀಕ್ರೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಂತಾರ ಸಿನಿಮಾ ದೇಶದೆಲ್ಲೆಡೆ ಅಬ್ಬರಿಸಿದ್ದು, ಇದೀಗ ಕಾಂತಾರ 2 ಬರಲಿದೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾರೂ ಈವರೆಗೂ ಬಾಯಿ ಬಿಟ್ಟಿರಲಿಲ್ಲ.ಆದರೆ ಇದೀಗ ಇದೇ ಮೊದಲ ಬಾರಿಗೆ ದಿಗಂತ್ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ.

ರಿಷಬ್ ಶೆಟ್ಟಿ ಅವರು ದಿಗಂತ್ ಕಾಂಬಿನೇಷನ್ ನಲ್ಲಿ ಬ್ಯಾಚ್ಯುಲರ್ ಪಾರ್ಟಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಈಗವರು ಆ ಸಿನಿಮಾದಿಂದ ಹೊರ ಬಂದಿದ್ದಾರೆ. ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣವನ್ನು ಸ್ವತಃ ದಿಗಂತ್ ಅವರೇ ಹೇಳಿಕೊಂಡಿದ್ದಾರೆ. ರಿಷಬ್ ಅವರು ಕಾಂತಾರ 2 ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ನಟಿಸಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ ನ ಕಾಂತಾರ ಸಿನಿಮಾ ಇದೀಗ ಎಲ್ಲಾ ಭಾಷೆಯಲ್ಲಿ ಬಿಡುಗಡೆಗೊಂಡು ಅಬ್ಬರಿಸಿದೆ. ಕೆಲವು ದಿನಗಳ ಬಳಿಕ ತುಳುವಿನಲ್ಲಿ ರಿಲೀಸ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!