ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ ಅಧ್ಯಾಯ 1’ ಶೂಟಿಂಗ್ ಇದೀಗ ಪೂರ್ಣಗೊಂಡಿದೆ. ಈ ಚಿತ್ರವನ್ನು ಆಗಸ್ಟ್ 2 ರಂದು ವಿಶ್ವಾದ್ಯಂತ ಬಿಡುಗಡೆ ಮಾಡುವ ಉದ್ದೇಶವಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೇಕಿಂಗ್ ವೀಡಿಯೋಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. 2.06 ನಿಮಿಷಗಳ ವೀಡಿಯೋಗೆ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ಸಿನಿಮಾದ ಮೇಲೆ ಇರುವ ಭರವಸೆ ಸ್ಪಷ್ಟವಾಗಿ ಕಾಣುತ್ತಿದೆ.
ಈ ಹಿಂದೆ ‘ಕಾಂತಾರ’ ಮೂಲಕ ಭಾರತೀಯ ಸಂಸ್ಕೃತಿಯ ಆಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದ ರಿಷಬ್ ಶೆಟ್ಟಿ, ಈ ಸಲ ಮತ್ತಷ್ಟು ವಿಭಿನ್ನ ಪ್ರಯತ್ನದೊಂದಿಗೆ ಹಿಂದಿರುಗಿದ್ದಾರೆ. ಮೇಕಿಂಗ್ ವೀಡಿಯೋದಲ್ಲಿ ಚಿತ್ರತಂಡದ ಪರಿಶ್ರಮ, ಸಂಶೋಧನೆ ಹಾಗೂ ಭಕ್ತಿಯಿಂದ ನಿರ್ಮಾಣವಾದ ದೃಶ್ಯಗಳು ಗಮನ ಸೆಳೆಯುತ್ತಿವೆ.
‘ಕಾಂತಾರ ಅಧ್ಯಾಯ 1’ ಚಿತ್ರದ ಕಥೆ purely ಭಾರತೀಯ ನೆಲೆಯ ಮೇಲೆ ಆಧಾರಿತವಾಗಿದ್ದು, ನಮ್ಮ ನಂಬಿಕೆ, ಸಂಪ್ರದಾಯ, ಸಂಸ್ಕೃತಿಯ ವಿಶಿಷ್ಟ ಅಂಶಗಳನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿದೆ.
3 ವರ್ಷಗಳ ಪರಿಶ್ರಮ:
ರಿಷಬ್ ಶೆಟ್ಟಿ ಹಾಗೂ ತಂಡವು ಮೂರು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ 250 ದಿನಗಳ ಚಿತ್ರೀಕರಣ ನಡೆದಿದ್ದು, ಸಾವಿರಾರು ಜನರ ಶ್ರಮವಿದೆ. ಮೇಕಿಂಗ್ ವೀಡಿಯೋದಲ್ಲಿ ಬಳಸಿರುವ ಸ್ಥಳಗಳು ಸಾಮಾನ್ಯವಾಗಿ ಕಂಡುಬರದಂತಹವು. ನೈಸರ್ಗಿಕತೆ, ಗ್ರಾಮೀಣ ಬವಣೆ ಮತ್ತು ಧಾರ್ಮಿಕ ಸಂವೇದನೆ ಚಿತ್ರಕ್ಕೆ ವಿಶೇಷ ಹಬ್ಬು ನೀಡಿದೆ.
ಚಿತ್ರವನ್ನು ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್‌ನಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ. ಇದು ಭಾರತೀಯ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಪ್ರಯತ್ನವಾಗಿದೆ.