Monday, November 10, 2025

ಮುಗಿಲಿನತ್ತ ‘ಕಾಂತಾರ ಚಾಪ್ಟರ್ 1’ ಸಕ್ಸಸ್‌: ಚಾಮುಂಡಿ ತಾಯಿಯ ದರುಶನ ಪಡೆದ ರಿಷಭ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗಿದ್ದು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಎರಡು ವಾರದ ಬಳಿಕವೂ ಚಿತ್ರಮಂದಿರಗಳ ಮುಂದೆ ಹೌಸ್​​ಫುಲ್ ಬೋರ್ಡುಗಳು ಬೀಳುತ್ತಿವೆ. ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ರಿಷಬ್ ಶೆಟ್ಟಿ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರುಶನ ಪಡೆದಿದ್ದಾರೆ. 

ನಂತರ ಮಾತನಾಡಿ, ಎಲ್ಲವೂ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶಾದ್ಯಂತ ತುಂಬಾ ಅದ್ಭುತವಾದ ಯಶಸ್ಸನ್ನು ಕೊಟ್ಟಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು. ಅದೇ ರೀತಿ ಈ ಬಾರಿಯೂ ಇನ್ನೊಂದು ಚಾಪ್ಟರ್ ಜನರಿಗೆ ತಲುಪಿರುವ ರೀತಿ ಹಾಗೂ ಅವರು ಒಪ್ಪಿಕೊಂಡಿರುವ ರೀತಿ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.

error: Content is protected !!