ದೇಶದೆಲ್ಲೆಡೆ ಕಾಂತಾರ ಸಿನಿಮಾಗೆ ಬಹುಬೇಡಿಕೆ: ಹಿಂದಿ, ತೆಲುಗಿನಲ್ಲಿ ಬಂತು ಟ್ರೈಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದಲ್ಲಿ ತೆರೆಕಂಡ ‘ಕಾಂತಾರ’ ಸಿನಿಮಾಕ್ಕೆ ದೇಶದೆಲ್ಲೆಡೆ ಅಮೋಘ ಬೆಂಬಲ ಸಿಗುತ್ತಿದ್ದು, ಹೀಗಾಗಿ ಹಿಂದಿ ಹಾಗೂ ತೆಲುಗು ವರ್ಷನ್ ಟ್ರೈಲರ್ ಅನ್ನು ಹೊಂಬಾಳೆ ಫಿಲ್ಮ್ಸ್ ರಿಲೀಸ್ ಮಾಡಿದೆ.

ಕನ್ನಡದಲ್ಲಿ ಬ್ಲಾಕ್‌ ಬಸ್ಟರ್ ಆಗಿದ್ದ ಸಿನಿಮಾಗೆ ಬೇರೆ ಭಾಷೆಗಳಿಂದ ಭಾರೀ ಬೇಡಿಕೆ ಬಂದಿದ್ದು, ತೆಲುಗು, ತಮಿಳು, ಮಲಯಾಳಂ ಬಾಲಿವುಡ್‌ನಲ್ಲೂ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಬಂದಿತ್ತು. ಈ ಬೆನ್ನಲ್ಲೇ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಿದೆ.

ಇನ್ನು ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ‘ಕಾಂತಾರ’ ಬಗ್ಗೆನೇ ಚರ್ಚೆಯಾಗುತ್ತಿದೆ. ಬೇರೆ ಭಾಷೆಯಲ್ಲಿ ಸಿನಿಮಾ ನೋಡಬೇಕು ಅಂತ ಬಯಸಿದ್ದವರಿಗೆ ತೆಲುಗು ಹಾಗೂ ಹಿಂದಿಯಲ್ಲಿ ಯಾವಾಗ ರಿಲೀಸ್ ಆಗುತ್ತೆ ಅನ್ನೋದೂ ರಿವೀಲ್ ಆಗಿದೆ.
ಕನ್ನಡಕ್ಕೆ ಮತ್ತೊಂದು ಬ್ಲಾಕ್‌ಬಸ್ಟರ್ ಕೊಟ್ಟ ಸಿನಿಮಾ ‘ಕಾಂತಾರ’. ಈ ಸಿನಿಮಾವೀಗ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಬೇರೆ ಬೇರೆ ಭಾಷೆಯಲ್ಲೂ ಫೇಮಸ್ ಆಗುತ್ತಿದೆ. ಸಬ್‌ಟೈಟಲ್ ಹಾಕಿ ಬೇರೆ ಬೇರೆ ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಮಾಡಲಾಗಿತ್ತು. ಆದರೆ, ಸಿನಿಮಾ ನೋಡಿದವರಿಗೆ ಸಬ್‌ಟೈಟಲ್‌ಗಿಂತ ಡಬ್ ಮಾಡಿ ರಿಲೀಸ್ ಮಾಡಿದ್ದರೆ ಒಳ್ಳೆಯದಿತ್ತು ಅನಿಸಿತ್ತು. ಹೀಗಾಗಿ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲೇ ಕಾಂತಾರ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದೆ ಬಂದಿದೆ.

ಇನ್ನು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾಗಳ ಟ್ರೈಲರ್ ಅನ್ನು ರಿಲೀಸ್ ಮಾಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ, ಸಿನಿಮಾ ಬಿಡುಗಡೆ ಮಾಡಲಿದೆ.

ಸದ್ಯ ಅಕ್ಟೋಬರ್ 14ರಂದು ‘ಕಾಂತಾರ’ ಹಿಂದಿ ಹಾಗೂ ಅಕ್ಟೋಬರ್ 15ರಂದು ‘ಕಾಂತಾರ’ ತೆಲುಗು ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here