ಕಪಿಲ್ ಶರ್ಮಾ ನನ್ನ ಬಾಯಿ, ತುಟಿ ಕುರಿತು ಅಸಹ್ಯ ಮಾಡಿದ್ದರು: ಮೌನ ಮುರಿದ ನಟಿ ಸುಮೋನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕಪಿಲ್ ಶರ್ಮಾ ಎಂಬ ಕಾಮಿಡಿ ಶೋ ಮೂಲಕ ಜನಪ್ರಿಯಗಳಿಸಿದ ನಟಿ ಸುಮೋನಾ ಚಕ್ರವರ್ತಿ (Sumona Chakravarti). ತಮ್ಮ ಮಾತುಗಳಿಂದಲೇ ಎಲ್ಲರ ಗಮಸೆಳೆದವರು.

ಕಪಿಲ್ ಶರ್ಮಾ ಎಂಬ ಕಾಮಿಡಿ ಶೋನಲ್ಲಿ ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಆದರೆ ಅದೊಮ್ಮೆ ತಾವು ಕಪಿಲ್​ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಬಹಿರಂಗಪಡಿಸಿದ್ದಾರೆ.

ಕಪಿಲ್ ಮತ್ತು ಸುಮೋನಾ ದಂಪತಿಯಾಗಿ ಆ್ಯಕ್ಟ್​ ಮಾಡಿದ್ದರು. ಅಷ್ಟಕ್ಕೂ ಸುಮೋನಾ ಮತ್ತು ಕಪಿಲ್ ಉತ್ತಮ ಸ್ನೇಹಿತರೇ. ಆದರೆ ಅದೊಮ್ಮೆ ತಮ್ಮ ಬಾಯಿ ಮತ್ತು ತುಟಿಗಳ ಬಗ್ಗೆ ಕಪಿಲ್​ ಅವರು ಮಾತನಾಡಿ ಬಾಡಿ ಷೇಮಿಂಗ್​ ಮಾಡಿದ್ದರ ಬಗ್ಗೆ ಈಗ ಸಮೋನಾ ಅಸಮಾಧಾನ ಹೊರಹಾಕಿದ್ದಾರೆ. ಅವರು ತಮಾಷೆ ಮಾಡುವ ಮೂಲಕ ತಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಎಂದು ಹೇಳಿದ್ದಾರೆ.

ಶೋ ಶೂಟಿಂಗ್​ ವೇಳೆ ಸುಮೋನಾ ಅವರು ತಮ್ಮ ಮಾತನಾಡುವ ಸಾಲುಗಳನ್ನು ಮರೆತಿದ್ದರಂತೆ. ಆ ಸಮಯದಲ್ಲಿ ಕಪಿಲ್ ಶರ್ಮಾ ಅವರು ಸುಮೋನಾ ಅವರ ತುಟಿಗಳ ಮೇಲೆ ತಮಾಷೆ ಮಾಡಿರುವುದಾಗಿ ನಟಿ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ನಂತರ ಅರ್ಚನಾ ಪುರಣ್ ಸಿಂಗ್ ಅವರು ತಮ್ಮ ಕೂರಿಸಿ ಸಮಾಧಾನಪಡಿಸಿದರು. ಆದರೂ ನನ್ನ ನೋವು ಕಡಿಮೆ ಆಗಿರಲಿಲ್ಲ ಎಂದು ಸುಮೋನಾ ಹೇಳಿದ್ದಾರೆ.

ಆರಂಭಿಕ ದಿನಗಳು ಸ್ವಲ್ಪ ಸವಾಲಾಗಿತ್ತು. ನನಗೆ ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ವಾಕ್ಯಗಳನ್ನು ಮರೆತಿದ್ದೆ. ಆಗ ಕಪಿಲ್​ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು. ಅವರು ನನ್ನ ಬಾಯಿಯಲ್ಲಿ ಹಾಸ್ಯವನ್ನು ಸಿಡಿಸಲು ಮೊದಲ ಸಂಚಿಕೆಯಲ್ಲಿ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ. ನಂತರ ಅವರು ಅದನ್ನು ಕೈಬಿಟ್ಟರು. ಆದರೆ ನನ್ನ ತುಟಿ ಮತ್ತು ಬಾಯಿಗೆ ಅಪಹಾಸ್ಯ ಮಾಡಿದರು. ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೆ ಮರೆತಿಲ್ಲ ಎಂದಿದ್ದಾರೆ.

ತಾವು ಹಾಸ್ಯ ಮಾಡಲು ಸೋತಾಗ ಅವರು ನಾನು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಲ್ಲ. ನಾನು ಅಂತಹ ತಮಾಷೆಯ ಹಾಸ್ಯಗಳೊಂದಿಗೆ ಬರಲು ಸಾಧ್ಯವಿಲ್ಲ ಎನ್ನುವುದನ್ನೂ ನೋಡಲಿಲ್ಲ. ನಾನು ತಮಾಷೆ ಮಾಡಿದರೆ, ಯಾರೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನನಗೆ ಅರಿವಿತ್ತು. ಆದ್ದರಿಂದ ಅದನ್ನು ಕಲಿಯಲು ಸ್ವಲ್ಪ ಸಮಯ ತೆಗೆದುಕೊಂಡೆ. ಆದರೆ ಅಷ್ಟರಲ್ಲಿಯೇ ಕಪಿಲ್​ ಅವರು ನನ್ನನ್ನು ಹಾಸ್ಯ ಮಾಡಿದ್ದರು ಎಂದಿದ್ದಾರೆ. ‘ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಅದು ಅವಮಾನ ಆಗುತ್ತದೆ. ಅದೂ ನನ್ನ ತುಟಿ ಅಥವಾ ಬಾಯಿಯ ಬಗ್ಗೆ ಅಸಹ್ಯ ಕಮೆಂಟ್​ ಮಾಡಿದ್ದಾರೆ. ಇದನ್ನು ನಾನು ಜೀವನ ಪೂರ್ತಿ ಮರೆಯುವುದಿಲ್ಲ ಎಂದಿದ್ದಾರೆ ಸುಮೋನಾ.

ಕಪಿಲ್ ಶರ್ಮಾ ಅವರೊಂದಿಗೆ ತೆರೆಮರೆಯಲ್ಲಿ ಎಲ್ಲವೂ ಮೋಜು ಮತ್ತು ಆಟವಾಗಿರುತ್ತದೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ದುರದೃಷ್ಟಕರ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು. ನಾನು ಸಭ್ಯವಾಗಿ ಕಾಣುವ ಹುಡುಗಿ. ನನಗೆ ಒಳ್ಳೆಯ ಬಾಯಿ ಇದೆ. ಆದರೆ ಅವರು ಈ ರೀತಿ ಕಮೆಂಟ್ ಮಾಡಿರುವ ಬಗ್ಗೆ ಎಲ್ಲರೂ ಆಡಿಕೊಳ್ಳುವಂತಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!