ಕರಾಚಿ, ಲಾಹೋರ್ ವಾಯುಪ್ರದೇಶ ತಾತ್ಕಾಲಿಕ ಮುಚ್ಚಿದ ಪಾಕಿಸ್ತಾನ

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಸೇನಾದಾಳಿ ನಡೆಸಲಿದೆ ಎಂಬ ಆತಂಕದಲ್ಲಿರುವ ಪಾಕಿಸ್ತಾನ ಎರಡು ಪ್ರಮುಖ ನಗರಗಳ ವಾಯು ಪ್ರದೇಶವನ್ನೂ ತಾತ್ಕಾಲಿಕವಾಗಿ ಮುಚ್ಚಿದೆ.

ಪಾಕಿಸ್ತಾನದ ಪ್ರಮುಖನಗರಗಳಾದ ಲಾಹೋರ್ ಮತ್ತು ಕರಾಚಿಯ ವಾಯುಪ್ರದೇಶವನ್ನು ಪಾಕಿಸ್ತಾನ ಸರ್ಕಾರ ತಾತ್ಕಾಲಿಕವಾಗಿ ಮುಚ್ಚಿದ್ದು, ಈ ನಗರಗಳ ಮೇಲೆ ಯಾವುದೇ ರೀತಿಯ ವೈಮಾನಿಕ ಹಾರಾಟವನ್ನು ಸರ್ಕಾರ ನಿಷೇಧಿಸಿದೆ.

ಮೇ ತಿಂಗಳಲ್ಲಿ ಪ್ರತಿದಿನ ಸೀಮಿತ ಅವಧಿಗೆ ಕರಾಚಿ ಮತ್ತು ಲಾಹೋರ್ ವಿಮಾನ ಮಾಹಿತಿ ಪ್ರದೇಶಗಳ ನಿರ್ದಿಷ್ಟ ಭಾಗಗಳನ್ನು ಮುಚ್ಚುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ ಎಂದು ಪಾಕ್ ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.

ಮೇ 1 ರಿಂದ ಮೇ 31 ರವರೆಗೆ ಸ್ಥಳೀಯ ಸಮಯ ಬೆಳಿಗ್ಗೆ 4:00 ರಿಂದ ಬೆಳಿಗ್ಗೆ 8:00 ರವರೆಗೆ ನಿರ್ಬಂಧಿತ ವಾಯುಪ್ರದೇಶವನ್ನು ಮುಚ್ಚಲಾಗುತ್ತದೆ ಎಂದು ಅಧಿಕೃತ ಸೂಚನೆಯನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ವಾಯುಪ್ರದೇಶ ಮುಚ್ಚುವಿಕೆ ನಿರ್ಣಯದಿಂದ ವಾಣಿಜ್ಯ ಹಾರಾಟ ಕಾರ್ಯಾಚರಣೆಗಳಿಗೆ ಗಮನಾರ್ಹವಾಗಿ ಅಡ್ಡಿಯಾಗುವುದಿಲ್ಲ. ಏಕೆಂದರೆ ನಿರ್ಬಂಧಿತ ಸಮಯದಲ್ಲಿ ವಿಮಾನಗಳನ್ನು ಪರ್ಯಾಯ ವಿಮಾನ ಮಾರ್ಗಗಳ ಮೂಲಕ ತಿರುಗಿಸಲಾಗುತ್ತದೆ ಎಂದು ಹೇಳಿದೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!