ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲಿಯಾ ಭಟ್ ಕಂಡರೆ ಕರಣ್ ಜೋಹರ್‌ಗೆ ಎಷ್ಟು ಪ್ರೀತಿ ಎನ್ನೋದು ಬಾಲಿವುಡ್‌ಗೆ ತಿಳಿದಿರುವ ವಿಚಾರ. ಆಲಿಯಾ ಪ್ರೀತಿ, ಮದುವೆ, ಪ್ರೆಗ್ನೆನ್ಸಿ ಎಲ್ಲ ಸಮಯದಲ್ಲಿಯೂ ತಂದೆ ಸ್ಥಾನದಲ್ಲಿ ನಿಂತು ಕರಣ್ ಮಾರ್ಗದರ್ಶನ ನೀಡಿದ್ದರು. ಇದೀಗ ಆಲಿಯಾ ಭಟ್ ಮಗುವನ್ನು ನೋಡಲು ಕರಣ್ ಆಲಿಯಾ ಮನೆಗೆ ತೆರಳಿದ್ದಾರೆ.
ಮಗುವನ್ನು ನೋಡೋಕೆ ಹೋಗುವ ಮುನ್ನ ಕರಣ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಹೋಗಿದ್ದಾರೆ. ಮಗು ಹುಟ್ಟಿದಾಗ ವಿದೇಶದಲ್ಲಿದ್ದೆ ಹಾಗಾಗಿ ಇಷ್ಟು ದಿನಗಳ ನಂತರ ಮಗು ನೋಡಲು ಹೋಗುತ್ತಿದ್ದೇನೆ ಎಂದು ಕರಣ್ ಹೇಳಿದ್ದಾರೆ.
ದೇಶಕ್ಕೆ ವಾಪಾಸಾದ ನಂತರ ಕರಣ್ ಮೊದಲು ಮಗುವನ್ನು ನೋಡಲು ಬರ‍್ತಿದ್ದಾರೆ. ವಿದೇಶ ಪ್ರಯಾಣ ಆದ ಕಾರಣ ಕೋವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ಬಂದ ನಂತರ ಆಲಿಯಾ ರಣ್‌ಬೀರ್ ಮನೆಗೆ ತೆರಳಿದ್ದಾರೆ.
ಈವರೆಗೂ ಆಲಿಯಾ ರಣ್‌ಬೀರ್ ಮನೆಗೆ ಯಾವ ಸೆಲೆಬ್ರಿಟಿ ಕೂಡ ಭೇಟಿ ಕೊಟ್ಟಿಲ್ಲ. ಮಗು ಸ್ವಲ್ಪ ದೊಡ್ಡದಾದ ನಂತರ ಮನೆಗೆ ಭೇಟಿ ನೀಡಲು ಸೆಲೆಬ್ರಿಟಿಗಳು ಕಾದಿದ್ದಾರೆ. ಆದರೆ ಕರಣ್ ಮಗುವನ್ನು ನೋಡಲಿರುವ ಮೊದಲ ಸೆಲೆಬ್ರಿಟಿ ಆಗಿದ್ದಾರೆ. ಆಲಿಯಾ ಮದುವೆ ದಿನ ಕರಣ್ ತಮ್ಮ ಮಗಳದ್ದೇ ಮದುವೆ ಎನ್ನುವಂತೆ ಬಿಕ್ಕಿಬಿಕ್ಕಿ ಅತ್ತಿದ್ದರು.