ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್ ಹಾಗೂ ನಟಿ ಕಂಗನಾ ರಣಾವತ್ ಜಗಳ ಈಗಿನದಲ್ಲ, ಮೊದಲಿನಿಂದಲೂ ಯಾವುದೇ ಶೋಗಳಲ್ಲಿ ಇಬ್ಬರೂ ಎದುರಾದರೂ ಒಂದು ಕಮೆಂಟ್ ಇದ್ದೇ ಇರುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಆಗಾಗ ಕೆಜೋ ಕಾಲೆಳೆಯುತ್ತಲೇ ಇರುತ್ತಾರೆ. ಅಂಥದ್ದೇ ಒಂದು ವಿಡಿಯೋವನ್ನು ಕಂಗನಾ ಶೇರ್ ಮಾಡಿದ್ದಾರೆ.
ಕರಣ್ ಜೀ ಹೇಳ್ತಾರೆ ದುಡ್ಡನ್ನು ಎಸೆದುಬಿಟ್ಟು ಏನು ಬೇಕಾದ್ರೂ ಮಾಡಿಸ್ತೀನಿ, ಯಾವ ರೀತಿ ಪರ್ಸೆಪ್ಷನ್‌ನ್ನೂ ನಿರ್ಮಾಣ ಮಾಡುವ ಶಕ್ತಿ ನನಗಿದೆ. ಇವರು ಬರೀ ಅವರ ಫಿಲಂಗಳನ್ನು ಹಿಟ್ ಮಾಡಿಕೊಳ್ಳೋಕೆ ಈ ದುಡ್ಡನ್ನು ಬಳಸ್ತಾರಾ? ಅಥವಾ ಬೇರೆಯವರ ಫಿಲಂ ಫ್ಲಾಪ್ ಮಾಡೋದಕ್ಕೂ ಬಳಸ್ತಾರಾ ಎಂದು ಕಂಗನಾ ಪ್ರಶ್ನೆ ಇಟ್ಟಿದ್ದಾರೆ.
ಇದಕ್ಕೆ ಸಾಕ್ಷಿ ಎನ್ನುವಂಥ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದು, ಎಲ್ಲ ರೀತಿಯ ಕಮೆಂಟ್‌ಗಳೂ ಬರುತ್ತಿವೆ. ಸದ್ಯ ವಿಡಿಯೋ ಮಾತ್ರ ಎಲ್ಲೆಡೆ ವೈರಲ್ ಆಗಿದೆ.
https://www.instagram.com/reel/CvUuq0foxcT/?utm_source=ig_web_copy_link&igshid=MzRlODBiNWFlZA==