ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣ್ ಈ ಬಾರಿ ಕಾಫಿ ವಿತ್ ಕರಣ್‌ನ ಎಪಿಸೋಡ್‌ನಲ್ಲಿ ಮನಬಿಚ್ಚಿ ಮಾತನಾಡಿ ಟ್ರೋಲ್ ಆಗಿದ್ರು.
ದೀಪಿಕಾ ರಣ್‌ವೀರ್‌ರ ಜೊತೆ ಡೇಟಿಂಗ್‌ನಲ್ಲಿ ಇದ್ದಾಗಲೂ ಬೇರೆಯವರನ್ನು ಮೀಟ್ ಮಾಡ್ತಿದ್ದೆ, ಆದರೆ ಯಾರೂ ರಣ್‌ವೀರ್ ಅಷ್ಟು ಕಂಫರ್ಟ್ ಅನಿಸಿರಲಿಲ್ಲ, ಎಕ್ಸೈಟ್‌ಮೆಂಟ್ ಇರಲಿಲ್ಲ. ಮತ್ತೆ ರಣ್‌ವೀರ್ ಕಡೆ ವಾಪಾಸ್ ಬಂದೆ ಎಂದು ಹೇಳಿದ್ದರು.
ರಣ್‌ವೀರ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಎದ್ದು ಕಾಣಿಸುತ್ತಿತ್ತು, ಒಂದು ಹುಡುಗನ ಜೊತೆ ಡೇಟಿಂಗ್ ಮಾಡುವಾಗ ಮತ್ತೊಂಬರ ಜೊತೆಯೂ ಡೇಟ್ಸ್‌ಗೆ ದೀಪಿಕಾ ತೆರಳಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗಿ ಟ್ರೋಲ್ ಪೇಜ್‌ಗಳಿಗೆ ಈ ವಿಷಯ ಆಹಾರವಾಗಿತ್ತು.
ಈ ಬಗ್ಗೆ ಕರಣ್ ಮಾತನಾಡಿದ್ದು, ದೀಪಿಕಾ ನಿಮ್ಮ ಬಗ್ಗೆ ಎಷ್ಟು ಜನ ಏನಾದ್ರೂ ಟ್ರೋಲ್ ಮಾಡ್ಲಿ, ಅದರಿಂದ ನಿಮಗೆ ಏನೂ ಉಪಯೋಗ ಇಲ್ಲ ಎಂದು ಹೇಳಿದ್ದಾರೆ.
ದೀಪಿಕಾ ಕರಣ್ ಶೋನಲ್ಲಿ ಈ ರೀತಿ ಮಾತನಾಡಿ ಟ್ರೋಲ್ ಆದ ಕಾರಣ, ಕರಣ್ ದೀಪಿಕಾ ಪರ ನಿಂತು ಮಾತನಾಡಿದ್ದಾರೆ.