April 9, 2026
Thursday, April 9, 2026
spot_img

CINE | ಧುರಂಧರ್‌ ರಣ್‌ವೀರ್‌ ಸಿನಿಮಾ ಅಲ್ಲ, ಇದು ಆದಿತ್ಯ ಧಾರ್‌ ಸಿನಿಮಾ ಎಂದ ಕರೀನಾ ಕಪೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆದಿತ್ಯ ಧಾರ್‌ ನಿರ್ದೇಶನದ ಧುರಂದರ್‌ ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಫುಲ್‌ ಹೌಸ್‌ ಆಗಿದೆ. ಸಿನಿಮಾವನ್ನು ಪ್ರತಿಯೊಬ್ಬರು ನೋಡಲೇಬೇಕು ಎನ್ನುವ ಮಟ್ಟಿಗಿನ ಬಿಲ್ಡಪ್‌ ಇದೆ. ಅಂತೆಯೇ ಪ್ರತಿ ಸೆಲೆಬ್ರಿಟಿಗಳು ಸಿನಿಮಾ ನೋಡಿ ತಮ್ಮ ಒಪಿನಿಯನ್‌ ಹಂಚಿಕೊಂಡಿದ್ದಾರೆ. ಇದೀಗ ನಟಿ ಕರೀನಾ ಕಪೂರ್‌ ಖಾನ್‌ ಈ ಬಗ್ಗೆ ಮಾತನಾಡಿದ್ದು, ಇದು ಡೈರೆಕ್ಷರ್ಸ್‌ ಸಿನಿಮಾ ಎಂದು ಹೇಳಿದ್ದಾರೆ.

ಎಲ್ಲೆಡೆ ರಣ್‌ವೀರ್‌ ಸಿಂಗ್‌ ಹೈಲೈಟ್‌ ಆಗಿದ್ದರೆ ಕರೀನಾ ಮಾತ್ರ ಇಲ್ಲಿ ಹೈಲೈಟ್‌ ಆಗಬೇಕಿರೋದು ರಣ್‌ವೀರ್‌ ಅಲ್ಲ, ಆದಿತ್ಯ ಧಾರ್‌ ಎಂದು ಹೇಳಿದ್ದಾರೆ. ರಣ್‌ವೀರ್‌ ಫ್ಯಾನ್ಸ್‌ಗೆ ಇದೇಕೋ ಅಸಮಾಧಾನ ಉಂಟುಮಾಡಿದೆ.

ಧುರಂಧರ್ ಸಿನಿಮಾ ಕೇವಲ ನಾಯಕ ನಟ ರಣವೀರ್ ಸಿಂಗ್ ಚಿತ್ರ ಅಲ್ಲ. ಇದು ಸಂಪೂರ್ಣವಾಗಿ ನಿರ್ದೇಶಕರ ಚಿತ್ರ. ಇಂದಿಗೂ ಸಹ, ಈ ಚಿತ್ರವನ್ನು ಉಲ್ಲೇಖಿಸಿದಾಗ, ಇದನ್ನು ಆದಿತ್ಯ ಧಾರ್ ಅವರ ಧುರಂಧರ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ ಕರೀನಾ.

ಕರೀನಾ ಕಪೂರ್ ಹೇಳಿಕೆಗೆ ಈಗ ನೆಟ್ಟಿಗರು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ನಿರ್ದೇಶಕರು ಈ ಚಿತ್ರದ ಹಿಂದೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿ ಕರೀನಾ ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದರು. ಕೆಲವರು ಕರೀನಾ ಪಕ್ಷಪಾತ ಹೊಂದಿದ್ದಾರೆ ಎಂದು ಆರೋಪಿಸಿದರು. ಧುರಂಧರ್‌ನ ಯಶಸ್ಸನ್ನು ಅವರು ಅರಗಿಸಿಕೊಂಡಿಲ್ಲ . ಅವರು ರಣವೀರ್ ಸಿಂಗ್ ಅವರ ಕಠಿಣ ಪರಿಶ್ರಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ನೆಟ್ಟಿಗರು ಬರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !