ಹೊಸದಿಗಂತ ಡಿಜಿಟಲ್ ಡೆಸ್ಕ್:
2015ರಲ್ಲಿ ತೆರೆ ಕಂಡಿದ್ದ ಕಬೀರ್ ಖಾನ್ ನಿರ್ದೇಶನದ ಸಲ್ಮಾನ್ ಖಾನ್ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಬಜರಂಗಿ ಭಾಯಿಜಾನ್ (Bajrangi Bhaijaan),
ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರಾ ನಟಿಸಿದ್ದು, ನವಾಜ಼ುದ್ದೀನ್ ಸಿದ್ದೀಕಿ ಮತ್ತು ಕರೀನಾ ಕಪೂರ್ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಹನುಮಂತನ ದೇವರ ಭಕ್ತನಾದ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಆರು ವರ್ಷದ ಮೂಕ ಪಾಕಿಸ್ತಾನಿ ಮುಸ್ಲಿಂ (Pak Muslim gril) ಹುಡುಗಿಯನ್ನು ಪಾಕಿಸ್ತಾನದ ಅವಳ ಸ್ವಂತ ಊರಿಗೆ ವಾಪಸು ಕರೆದೊಯ್ಯಲು ಮಾಡುವ ಸಾಹಸದ ಕಥಾಚಿತ್ರವನ್ನು ಇದು ಒಳಗೊಂಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರೀನಾ ಕೆಮಿಸ್ಟ್ರಿಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದರು.
ಇದೀಗ ಬಜರಂಗಿ ಭಾಯಿಜಾನ್ 2 ಬರುತ್ತಿದೆ. ಬಜರಂಗಿ ಭಾಯಿಜಾನ್‌ನ ಸೀಕ್ವೆಲ್ ಅನ್ನು ಕೆಲವು ಸಮಯದ ಹಿಂದೆ ಘೋಷಿಸಲಾಗಿತ್ತು. ಈ ಚಿತ್ರದ ಹೆಸರು ಪವನ್ ಪುತ್ರ ಭಾಯಿಜಾನ್ (Pawan Putra Bhaijaan)ಎಂದು ಹೇಳಲಾಗಿತ್ತು. ಆದರೆ ಕರೀನಾ ಇರಲ್ಲ. ಏಕೆಂದರೆ ಕರೀನಾ ಅವರ ಸ್ಥಾನವನ್ನು ಪೂಜಾ ಹೆಗ್ಡೆ ತುಂಬಲಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಪವನ್ ಪುತ್ರ ಭಾಯಿಜಾನ್ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಲಾಗಿದೆ.
‘ಪವನ್ ಪುತ್ರ ಭಾಯಿಜಾನ್’ ಚಿತ್ರದಲ್ಲಿ ಕರೀನಾ ಕಪೂರ್ (Kareena Kapoor) ಬದಲಿಗೆ ಸಲ್ಮಾನ್ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಪೂಜಾ ಹೊಸ ಪಾತ್ರವನ್ನು ನಿರ್ವಹಿಸುತ್ತಾರೋ ಅಥವಾ ಬೆಬೋನೇ ಹೆಜ್ಜೆ ಹಾಕುತ್ತಾರೋ ಎಂದು ನೋಡಬೇಕಾಗಿದೆ’ ಎನ್ನಲಾಗಿದೆ.
ಕರೀನಾ ಕಪೂರ್ ಖಾನ್ ಚಿತ್ರದ ತಾರೆಯಾಗಿದ್ದರು, ಆದರೆ ತಯಾರಕರು ಪೂಜಾ ಹೆಗ್ಡೆ ಅವರನ್ನು ಸೀಕ್ವಲ್ನಲ್ಲಿ ಜೋಡಿ ಮಾಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.
ಇತ್ತೀಚೆಗೆ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಇದನ್ನು ಪೂಜಾ ನಿರಾಕರಿಸಿದ್ದಾರೆ. ನಾವಿಬ್ಬರೂ ಒಳ್ಳೆಯ ಸ್ನೇಹತರು ಎಂದಿದ್ದಾರೆ.