ಹೊಸದಿಗಂತ ವರದಿ,ಧಾರವಾಡ:
ಕಾರ್ಗಿಲ್ ವಿಜಯ ದಿವಸ 25ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊoಡ ಪಂಜಿನ ಮೆರವಣಿಗೆ, ಹಿಂದಿ ಪ್ರಚಾರ ಸಭಾ ಸರ್ಕಲ್ ಮೂಲಕ ಕಾರ್ಗಿಲ್ ಸ್ತೂಪ ಬಳಿ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಬಸವರಾಜ ಗರಗ, ಪವನ ಥಿಟೆ, ರಾಹುಲ್ ಮಲ್ಲಿಗವಾಡ, ಕಾರ್ಯಕರ್ತರು ಪಾಲ್ಗೊಂಡಿದ್ದರು.