ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕರಿಷ್ಮಾ ಕಪೂರ್ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಜಯ್ ಕಪೂರ್ ಯುಕೆಯಲ್ಲಿದ್ದರು. ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಪೋಲೊ ಆಡುತ್ತಿದ್ದಾಗ ತೀವ್ರ ಹೃದಯಾಘಾತವಾಯಿತು. ಸಾವಿಗೂ ಮುನ್ನ ಸಂಜಯ್ ಅವರು ಅಹಮದಾಬಾದ್-ಲಂಡನ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪೋಸ್ಟ್ ಹಾಕಿದ್ದರು.
ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಭಯಾನಕ ಸುದ್ದಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತ ಎಲ್ಲಾ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ನೋವು ಭರಿಸುವ ಶಕ್ತಿ ಪಡೆಯಲಿ. ಜೀವನ ಕ್ಷಣಿಕ, ಏನಾಗುತ್ತದೆ ಎಂದು ಯೋಚಿಸುವ ಬದಲು ಚಾನ್ಸ್ ತೆಗೆದುಕೊಳ್ಳಿ, ಲೈಫ್‌ನ್ನು ಎಂಜಾಯ್ ಮಾಡಿ ಎಂದು ಟ್ವೀಟ್ ಮಾಡಿದ್ದರು.
ಸಂಜಯ್ ಬಾಲಿವುಡ್ ನಟಿ ಕರಿಷ್ಮಾ ಅವರನ್ನು 2003 ರಲ್ಲಿ ವಿವಾಹವಾದರು. 2016 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ. ಇಬ್ಬರೂ ಮಕ್ಕಳು ಕರಿಷ್ಮಾ ಅವರ ಜೊತೆಗಿದ್ದಾರೆ. ಸಂಜಯ್ ನ್ಯೂಯಾರ್ಕ್‌ನಲ್ಲಿ ಭೇಟಿಯಾದ ಪ್ರಿಯಾ ಸಚ್‌ದೇವ್ ಅವರನ್ನು ಪ್ರೀತಿಸುತ್ತಿದ್ದರು. ಐದು ವರ್ಷಗಳ ಡೇಟಿಂಗ್ ನಂತರ, ಅವರು ದೆಹಲಿಯಲ್ಲಿ ವಿವಾಹವಾದರು. ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ.