ಜೆಡಿಎಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೆಲವೇ ಗಂಟೆಗಳು ಬಾಕಿ ಇದ್ದು, ಇದೀಗ ಜೆಡಿಎಸ್‌ 13 ಮಂದಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಿದೆ.

ಜೆಡಿಎಸ್ ನಿನ್ನೆ 59 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಬಹುತೇಕ ಅಭ್ಯರ್ಥಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ (ಚಂದನ್ ಕುಮಾರ್)
ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೇರಾ
ಯಾದಗಿರಿ – ಎ.ಬಿ. ಮಾಲಕರೆಡ್ಡಿ
ಭಾಲ್ಕಿ- ರೌಫ್ ಪಟೇಲ್
ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ
ಮೊಳಕಾಲ್ಮೂರು – ಮಹಾದೇವಪ್ಪ
ಪುಲಕೇಶಿನಗರ – ಅನುರಾಧ
ಶಿವಾಜಿನಗರ – ಅಬ್ದುಲ್ ಜಫರ್ ಆಲಿ
ಶಾಂತಿನಗರ- ಮಂಜುನಾಥ್ ಗೌಡ
ಬೆಳ್ತಂಗಡಿ- ಅಶ್ರಫ್ ಅಲಿ ಕುಂಞ
ಮಂಗಳೂರು ನಗರ ಉತ್ತರ – ಮೋಹಿನುದ್ದೀನ್ ಬಾವ
ಮಂಗಳೂರು – ಅಲ್ತಾಫ್ ಕುಂಪಾಲ
ಬಂಟ್ವಾಳ- ಪ್ರಕಾಶ್ ರಫಾಯಲ್ ಗೊಮ್ಸ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!