ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗಗಳ ಟಾಪರ್ಸ್‌ ಪಟ್ಟಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಎಂಜಿನಿಯರಿಂಗ್‌ (Engineering) ವಿಭಾಗದಲ್ಲಿ ಬೆಂಗಳೂರಿನ ಮಲ್ಲಸಂದ್ರದ ಶ್ರೀ ಕುಮಾರನ್ಸ್‌ ಕಾಲೇಜಿನ ವಿಘ್ನೇಶ್‌ ನಟರಾಜ್‌ ಕುಮಾರ್‌ ಪ್ರಥಮ ರ‍್ಯಾಂಕ್‌ ಪಡೆದರೆ ಬೆಂಗಳೂರಿನ ಆರ್‌ವಿ ಕಾಲೇಜಿನ ಅರುಣ್‌ ಕೃಷ್ಣಮೂರ್ತಿ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಫಲಿತಾಂಶ ಪ್ರಕಟಿಸಿದರು. ಈ ವೇಳೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತರಿದ್ದರು.

ಒಟ್ಟು 2,61,610 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 2,44,345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರಾಗಿದ್ದರು.

ಇಂಜಿನಿಯರಿಂಗ್ ಕೋರ್ಸಿಗೆ 2,03,381 ರ‍್ಯಾಂಕ್‌ ನೀಡಲಾಗಿದೆ. ಕೃಷಿ ವಿಜ್ಞಾನ ಕೋರ್ಸುಗಳಿಗೆ 1,64,187 ವಿದ್ಯಾರ್ಥಿಗಳು, ಪಶುಸಂಗೋಪನೆಗೆ 1,66,756 ವಿದ್ಯಾರ್ಥಿಗಳು, ಯೋಗ ಮತ್ತು ನ್ಯಾಚುರೋಪತಿಗೆ 2,06,191 ವಿದ್ಯಾರ್ಥಿಗಳು ಬಿ. ಫಾರ್ಮ ಕೋರ್ಸಿಗೆ ಮತ್ತು ಫಾರ್ಮ-ಡಿ ಕೋರ್ಸಿಗೆ 2,06,340 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ. ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು 1,66,808 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಮೂಲಕ ಫಲಿತಾಂಶವನ್ನು ಚೆಕ್‌ ಮಾಡಿಕೊಳ್ಳಬಹುದು.

ಎಂಜಿನಿಯರಿಂಗ್ ವಿಭಾಗದ ಟಾಪರ್ಸ್
1.ವಿವಿಘ್ನೇಶ್‌ ನಟರಾಜ್‌ ಕುಮಾರ್ (ಶ್ರೀ ಕುಮಾರನ್ಸ್‌, ಮಲ್ಲಸಂದ್ರ)
2.ಅರ್ಜುನ್ ಕೃಷ್ಣಸ್ವಾಮಿ (ಆರ್.ವಿ ಕಾಲೇಜು, ಜಯನಗರ, ಬೆಂಗಳೂರು)
3.ಸಮೃದ್ದ ಶೆಟ್ಟಿ (ವಿದ್ಯಾನಿಕೇತನ ಪಿಯು ಕಾಲೇಜು, ಹುಬ್ಬಳ್ಳಿ)

ಬಿಎನ್‍ವೈಎಸ್ ವಿಭಾಗದ ಟಾಪರ್ಸ್
1. ಪ್ರತೀಕ್ಷಾ. ಆರ್ ( ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
2. ಭೈರೇಶ್, ಎಸ್‍ಎಚ್ (ಎಕ್ಸ್‌ಪರ್ಟ್‌ ಕಾಲೇಜು, ಮಂಗಳೂರು)
3. ಶ್ರೀಜಾನ್. ಎಂ.ಎಚ್.( ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಬಿಎಸ್‍ಸಿ ಕೃಷಿ ವಿಭಾಗದ ಟಾಪರ್ಸ್
1. ಭೈರೇಶ್. ಎಸ್‍ಎಚ್(ಎಕ್ಸ್‌ಪರ್ಟ್‌ ಕಾಲೇಜು, ಮಂಗಳೂರು)
2. ಅನುರಾಗ್ ರಂಜನ್( ಪ್ರಮಾಣ ಕಾಲೇಜು, ರಾಯಚೂರು)
3. ಕಾರ್ತಿಕ್ ಮನೋಹರ್(ಲೇಡಿ ಅನುಸೂಯ ಅಕಾಡೆಮಿ, ರಾಜಸ್ಥಾನ)

ಬಿವಿಎಸ್‍ಸಿ ಪಶು ವಿಜ್ಞಾನ ವಿಭಾಗದ ಟಾಪರ್ಸ್
1. ಮಾಳವಿಕ ಕಪೂರ್ (ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)
2. ಪ್ರತೀಕ್ಷಾ( ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
3. ಚಂದನ್ ಗೌಡ(ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)

ಬಿ ಫಾರ್ಮಾ ವಿಭಾಗದ ಟಾಪರ್ಸ್
1. ಪ್ರತೀಕ್ಷಾ (ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
2. ಮಾಳವಿಕ ಕಪೂರ್ (ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು)
3. ಮಾಧವ ಸೂರ್ಯ( ನಾರಾಯಣ ಇ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ, ಬೆಂಗಳೂರು)

ಬಿಎಸ್‍ಸಿ ನರ್ಸಿಂಗ್‌ ವಿಭಾಗದ ಟಾಪರ್ಸ್
1.ಮಾಳವಿಕ ಕಪೂರ್ (ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು)
2. ಪ್ರತೀಕ್ಷಾ (ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
3.ಚಂದನ್ ಗೌಡ. (ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!