ಕರ್ನಾಟಕ ಅಂದ್ರೆ ಕಾಂಗ್ರೆಸ್‌ನವ್ರಿಗೆ ಎಟಿಎಂ ಇದ್ದಂತೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿಯಲ್ಲಿ ಪ್ರಧಾನಿ ಮೋದಿ ಮೇನಿಯಾ ಆರಂಭವಾಗಿದ್ದು, ಲಕ್ಷ ಲಕ್ಷ ಬಿಜೆಪಿ ಅನುಯಾಯಿಗಳ ಮುಂದೆ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.

ಕನ್ನಡದಲ್ಲಿಯೇ ಭಾಷಣ ಮಾಡಿದ ಪ್ರಧಾನಿ ಮೋದಿ ಶಿವಶರಣರ, ಬಸವೇಶ್ವರರ ನಾಡು ಕಲಬುರಗಿಯ ಜನತೆಗೆ ನಮಸ್ಕಾರ ಎಂದು ಹೇಳಿದ್ದಾರೆ.

ಹೆಲಿಪ್ಯಾಡ್ ಮೂಲಕ ಕೆಳಗೆ ನೋಡಿದೆ ನಿಮ್ಮೆಲ್ಲರನ್ನು ನೋಡಿ ನನ್ನ ಉತ್ಸಾಹ ಹೆಚ್ಚಾಗಿದೆ. ಈ ಬಾರಿ ಇದೇ ಜೋಶ್‌ನಿಂದ ಬಿಜೆಪಿ ಗೆಲ್ಲಿಸಿ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಬೇರೆ ಜನರ ಜೇಬು ತುಂಬಿಸಿಕೊಳ್ಳೋದಕ್ಕೆ ಕಾಂಗ್ರೆಸ್ ಕರ್ನಾಟಕವನ್ನು ಬಳಸಿಕೊಂಡಿದೆ.

ನೀವೇ ಗಮನಿಸಿ, ನಿಮ್ಮ ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡಿಲ್ಲ. ಕಾನೂನು ವ್ಯವಸ್ಥೆ ಸರಿ ಇಲ್ಲ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಜನ ಕಾಂಗ್ರೆಸ್ ಸರ್ಕಾರ ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!