ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.ಧಾರವಾಡ ಕ್ಷೇತ್ರದಲ್ಲೇ ಸತತ ಐದನೇ ಬಾರಿಗೆ ಗೆದ್ದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ದಾಖಲೆ ಬರೆದಿದ್ದಾರೆ.
80 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಬಿಜೆಪಿ 238, ಕಾಂಗ್ರೆಸ್ 97, ಎಸ್‌ಪಿ 33, ಟಿಎಂಸಿ 29, ಡಿಎಂಕೆ 21, ಜೆಡಿಯು 15, ಎಸ್‌ಎಸ್ (ಉದ್ಧವ್ ಠಾಕ್ರೆ ಬಣ) 10, ಎಸ್‌ಎಸ್ ಶಿಂಧೆ 6, ಟಿಡಿಪಿ 16, ವೈಎಸ್‌ಆರ್‌ಸಿಪಿ 4, ಎಎಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.