ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದ್ದು, ಕಾಂಗ್ರೆಸ್ ಗದ್ದಲದ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿ ಹಾಕಿದ್ದಾರೆ. ಡಿಜಿಟಲ್ ಸ್ಟಾಂಪ್ ಬಳಕೆಗೆ ಅನುಮತಿ ನೀಡುವ ವಿಧೇಯಕ ಇದಾಗಿದೆ. ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಧರಣಿ ಮುಂದುವರಿಸಿದ್ದಾರೆ. ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ.
ಡಿಜಿಟಲ್ ಸ್ಟಾಂಪ್ ಬಳಕೆಗೆ ಅನುಮತಿ ನೀಡುವ ವಿಧೇಯಕವನ್ನು ಕಂದಾಯ ಸಚಿವ ಆರ್, ಅಶೋಕ್ ಮಂಡಿಸಿದ್ದಾರೆ. ಇದರ ನಡುವೆಯೂ ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿದ್ದು, ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಗದ್ದಲದ ನಡುವೆಯೇ ಸ್ಪೀಕರ್ ಸ್ಟಾಂಪ್ ವಿಧೇಯಕ ಮತಕ್ಕೆ ಹಾಕಿದ್ದಾರೆ. ಕೈಗಾರಿಕೆಗಳು ರಾಜ್ಯಕ್ಕೆ ಬರಲು ವಿಧೇಯಕ ಪ್ರೋತ್ಸಾಹ ನೀಡುತ್ತದೆ. ಕೈಗಾರಿಕೆಗಳಿಗೆ ಸ್ಟಾಂಒ ಡ್ಯೂಟಿಯನ್ನು ೨೫ ಲಕ್ಷ ರೂ.ಗಳಿಗೆ ಮಿತಿಗೊಳಿಸುತ್ತದೆ.