ಹೊಸದಿಗಂತ ಡಿಜಿಟಲ್ ಡೆಸ್ಕ್:
‘ತೈವಾನ್ ಓಪನ್’ ಕೂಟದಲ್ಲಿ ಕರ್ನಾಟಕದ ಡಿ.ಪಿ. ಮನು(DP Manu) ಅವರು ಚಿನ್ನದ ಪದಕ(DP Manu bags gold) ಜಯಿಸಿದ್ದಾರೆ.
ಅಂತಿಮ ಎಸೆತದಲ್ಲಿ 81.58 ಮೀಟರ್‌ಗಳ ಗರಿಷ್ಠ ದೂರ ದಾಖಲಿಸಿ ಈ ಸಾಧನೆ ತೋರಿದರು. ಆರಂಭಿಕ ಎಸೆತವನ್ನು 78.32 ಮೀ ಎಸೆತದ ಮನು ದ್ವಿತೀಯ ಎಸೆತದಲ್ಲಿ 76.80 ಮೀ, 3ನೇ ಎಸೆತದಲ್ಲಿ 80.59 ಮೀ., 5ನೇ ಎಸೆತದಲ್ಲಿ 81.52 ಮೀ. ದೂರ ದಾಖಲಿಸಿದರು.
ಆದ್ರೆ ಚಿನ್ನ ಗೆದ್ದರೂ ಕೂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಒಲಿಂಪಿಕ್ಸ್ ಟಿಕೆಟ್ ಪಡೆಯಬೇಕಿದ್ದರೆ 85.50 ಮೀ. ದೂರ ಎಸೆಯಬೇಕು. ಮನದಂಡವನ್ನು ಇನ್ನೂ ಕೂಡ ದಾಟದ ಕಾರಣ ಮನುಗೆ ಇನ್ನೂ ಪ್ಯಾರಿಸ್ ಒಲಿಂಪಿಕ್ಸ್ ಬಾಗಿಲು ತೆರೆದಿಲ್ಲ. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಮಾತ್ರ ಜಾವೆಲಿನ್ ವಿಭಾಗದಿಂದ ಒಲಿಂಪಿಕ್ಸ್ ಅರ್ಹತೆ ಪೆಡೆದಿದ್ದಾರೆ.
Congratulations bro