August 24, 2026
Monday, August 24, 2026
spot_img

ಬಜೆಟ್‌ನಲ್ಲಿ ಕರ್ನಾಟಕ ನಿರ್ಲಕ್ಷ್ಯ | ಹಲವು ಬೇಡಿಕೆಗಳಿಗೆ ಸ್ಪಂದನೆಯೇ ಇಲ್ಲ: ಎಂ.ಬಿ. ಪಾಟೀಲ್ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಕೇಂದ್ರ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಾಲರ್ ಮೌಲ್ಯ ಕುಸಿತ, ತಲಾ ಆದಾಯ ರ‍್ಯಾಂಕಿಂಗ್ನಲ್ಲಿ ಹಿನ್ನಡೆ ಮತ್ತು ರಾಜ್ಯದ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದನೆ ಇಲ್ಲದಿರುವುದು ಈ ಬಜೆಟ್‌ನ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಟೀಲ್, ಬೆಂಗಳೂರು–ಹೈದರಾಬಾದ್ ಹಾಗೂ ಬೆಂಗಳೂರು–ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ ಸ್ವಾಗತಾರ್ಹವಾದರೂ, ಇದರಿಂದ ಕರ್ನಾಟಕಕ್ಕೆ ಬಹುಮಾನ್ಯ ಲಾಭವಾಗುವುದಿಲ್ಲ ಎಂದರು. ಬದಲಾಗಿ ಬೆಂಗಳೂರು–ಪುಣೆ ಕಾರಿಡಾರ್‌ಗೆ ಆದ್ಯತೆ ನೀಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿತ 5,600 ಕೋಟಿ ಬಿಡುಗಡೆ ಮಾಡುವ ಬೇಡಿಕೆಗಳನ್ನು ಬಜೆಟ್ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟೀಕಿಸಿದರು.

ಬಜೆಟ್‌ನಲ್ಲಿ ಘೋಷಿಸಲಾದ ವಿಶ್ವವಿದ್ಯಾಲಯ ಟೌನ್‌ಶಿಪ್, ವೈದ್ಯಕೀಯ ಪ್ರವಾಸೋದ್ಯಮ ಹಬ್ ಮತ್ತು ಬಯೋಫಾರ್ಮಾ ಹಬ್ ಪರಿಕಲ್ಪನೆಗಳು ರಾಜ್ಯದ ‘ಕ್ವೀನ್ ಸಿಟಿ’ ಯೋಜನೆಯ ಪ್ರಭಾವವೇ ಎಂದು ಪಾಟೀಲ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !