BIG BOSS | ವಿನಯ್‌ಗೆ ಕಾರ್ತಿಕ್ ಚಪ್ಪಲಿಲಿ ಹೊಡೆದಿಲ್ಲ, ಕಾರ್ತಿಕ್ ಪರ ನಿಂತ ಮೈಕಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎನ್ನುವ ಟಾಸ್ಕ್ ನೀಡಿದ್ದು, ಬರುಬರುತ್ತಾ ಟಾಸ್ಕ್ ಎಲ್ಲೆಲ್ಲಿಗೋ ಹೋಗುತ್ತಿದೆ.

ವಿನಯ್‌ಗೆ ಕಾರ್ತಿಕ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ವಿನಯ್ ರೇಗಾಡಿದ್ದಾರೆ. ಈ ಮನೆಯಲ್ಲಿ ಇರೋದಿಲ್ಲ ಕಳಿಸಿ ಹೊರಗೆ ಎಂದು ಬಿಗ್‌ಬಾಸ್ ಮುಖ್ಯದ್ವಾರವನ್ನು ತಳ್ಳಿದ್ದಾರೆ.

ಈ ಮಧ್ಯೆ ಮೈಕಲ್ ಕಾರ್ತಿಕ್ ಸಪೋರ್ಟ್‌ಗೆ ಬಂದಿದ್ದಾರೆ. ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟನ್ನು ವಿನಯ್ ಎಸೆದಿದ್ದಾರೆ ಇದೇ ಸಿಟ್ಟಿನಲ್ಲಿ ಕಾರ್ತಿಕ್ ತಮ್ಮ ಚಪ್ಪಲಿಯನ್ನು ನೆಲಕ್ಕೆ ಎಸೆದಿದ್ದಾರೆ. ಅದು ಬೌನ್ಸ್ ಆಗಿ ಬಂದು ವಿನಯ್‌ಗೆ ಬಿದ್ದಿದೆ.

ಈ ವಿಚಾರವನ್ನು ಮೈಕಲ್ ವಿನಯ್‌ಗೆ ಹೇಳಿದ್ದಾರೆ. ಇದರಿಂದ ವಿನಯ್‌ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಮೈಕಲ್ ಕಾರ್ತಿಕ್‌ಗೆ ಸಪೋರ್ಟ್ ಮಾಡಿದ್ದಾನೆ ಎಂದು ಸಿಟಟಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!