ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಉತ್ತಮ ಬಾಂಧವ್ಯ ಇತ್ತು, ಸ್ನೇಹಿತ್ ಹೊರಗೆ ಹೋದಾಗ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಸ್ನೇಹಿತ್ ಕೂಡ ಇಷ್ಟ ಆಗಿದ್ದೀರಾ ಹೊರಗೆ ಬಂದಮೇಲೆ ನಿಮಗೆ ಇಷ್ಟವಿದ್ದರೆ ಪ್ರಪೋಸ್ ಮಾಡ್ತೇನೆ ಎಂದು ಧೈರ್ಯವಾಗಿ ಹೇಳಿದ್ದರು. ಇದೀಗ ಸ್ನೇಹಿತ್ ಎಲಿಮಿನೇಟ್ ಆದ ನಂತರ ಕಾರ್ತಿಕ್ ಹಾಗೂ ನಮ್ರತಾ ತುಂಬಾ ಕ್ಲೋಸ್ ಆಗಿದ್ದಾರೆ.
ಯಾವಾಗ್ಲೂ ಕೈ ಹಿಡಿದುಕೊಂಡಿರುವುದು, ಫ್ಲರ್ಟ್ ಮಾಡೋದು ಜನರ ಕಣ್ಣಿಗೆ ಕಾಣಿಸಿದೆ. ಈ ವಿಷಯ ಎಲ್ಲೆಡೆ ಟ್ರೋಲ್ ಆಗ್ತಿದೆ ಎಂದು ಸ್ನೇಹಿತ್ ನಮ್ರತಾಗೆ ಹೇಳಿದ್ದಾರೆ. ಇದರಿಂದ ನಮ್ರತಾ ಸಖತ್ ಬೇಜಾರಾಗಿದ್ದು, ನನಗೆ ಈ ಮನೆಯೇ ಬೇಡ. ಕಾರ್ತಿಕ್‌ಗೆ ಹುಡುಗಿ ಇದಾಳೆ, ಗೊತ್ತಿದ್ದೂ ಬೀಳೋಕೆ ನಾನೇನು ಬಕ್ರನಾ? ನಿಮ್ಮಷ್ಟು ಅವನ ಜೊತೆ ನಾನು ಕ್ಲೋಸ್ ಇಲ್ಲ. ನನ್ನ ಕ್ಯಾರೆಕ್ಟರ್ ಹಾಳಾದಂತೆ ಕಾಣ್ತಿದೆ. ನಾನು ಮನೆಗೆ ಹೋಗ್ಬೇಕು ಎಂದು ಕಣ್ಣೀರಿಟ್ಟಿದ್ದಾರೆ.