ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಾರ್ತಿಕ್ ಮಹೇಶ್ ಜೀವನಕ್ಕೆ ಬಿಗ್ಬಾಸ್ ದೊಡ್ಡ ತಿರುವು ಕೊಟ್ಟಿದೆ. ಸಿಕ್ಕಾಪಟ್ಟೆ ಫ್ಯಾನ್ಸ್ ಹೆಚ್ಚಾಗಿದ್ದಾರೆ.
ಎಲ್ಲಿ ಹೋದ್ರೂ ಕಾರ್ತಿಕ್ ಅಭಿಮಾನಿಗಳು ಆಗಮಿಸುತ್ತಾರೆ, ಮಾಧ್ಯಮದವರು, ಯುಟ್ಯೂಬ್ ಚಾನೆಲ್ನವರು ಪ್ರಶ್ನೆಗಳನ್ನು ಕೇಳ್ತಾರೆ. ಇದೇ ರೀತಿ ಕಾರ್ತಿಕ್ ಹಾಗೂ ಅವರ ತಾಯಿ ಮೀನಾಕ್ಷಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.
ನಿಮ್ಮ ಮಗನಿಗೆ ಮದುವೆ ಮಾಡೋಕೆ ರೆಡಿ ಇದ್ದೀರಾ ಎನ್ನುವ ಪ್ರಶ್ನೆ ಎದುರಾಗಿದ್ದು, ನಾವು ಯಾವಾಗ್ಲು ರೆಡಿ ಆದ್ರೆ ಅವನು ರೆಡಿಯಾಗಬೇಕು ಅಷ್ಟೆ ಅಂತ ಮಗನ ಮುಖ ನೋಡಿದ್ದಾರೆ. ಇನ್ನು ಕಾರ್ತಿಕ್ ಮದುವೆ ಆಗುವ ಹೆಣ್ಣು ಬಿಗ್ಬಾಸ್ ಸೀಸನ್ 10 ನಲ್ಲಿ ಇದ್ರಾ ಎನ್ನುವ ಪ್ರಶ್ನೆ ಎದುರಾದಾಗ ಮೀನಾಕ್ಷಿ ಅವರು ಹೌದು ಎಂದು ಉತ್ತರಿಸಿದ್ದಾರೆ. ಇದಕ್ಕೆ ಖುದ್ದು ಕಾರ್ತಿಕ್ ಶಾಕ್ ಆಗಿದ್ದಾರೆ.
ಕಾರ್ತಿಕ್ ತಾಯಿ ಹೇಳುತ್ತಿರುವ ಹೆಣ್ಣು ಸಂಗೀತಾ ಶೃಂಗೇರಿನಾ ಅಥವಾ ನಮ್ರತಾ ಗೌಡನಾ ಅಂತ ಜನ ಯೋಚಿಸ್ತಿದ್ದಾರೆ!