ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ವಿನ್ನರ್ ಕಾರ್ತಿಕ್ ಮಹೇಶ್ ಅವರು ದೊಡ್ಡ ಮಟ್ಟದ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರು ‘ರಾಮರಸ’ ಹೆಸರಿನ ಸಿನಿಮಾ ಕೂಡ ಸಹಿ ಮಾಡಿದ್ದು, ಶೂಟ್ ನಡೆಯುತ್ತಿದೆ.
ಈಗ ಅವರು ರಿಯಾಲಿಟಿ ಶೋ ಒಂದಕ್ಕೆ ಹೋಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿರೋ ರಿಯಾಲಿಟಿ ಶೋನ ನೇತೃತ್ವವನ್ನು ಕಾರ್ತಿಕ್ ವಹಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಅವುಗಳ ಸಾಲಿಗೆ ಈಗ ಹೊಸ ಶೋ ಸೇರ್ಪಡೆ ಆಗಿದೆ. ಅದುವೇ ‘ಸುವರ್ಣ ಸೆಲೆಬ್ರಿಟಿ ಲೀಗ್’. ಸೆಪ್ಟೆಂಬರ್ 15ರಿಂದ ರಾತ್ರಿ 7 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಮತ್ತೊಂದು ವಿಶೇಷ ಎಂದರೆ ಕಿರುತೆರೆ ಕಲಾವಿದರ ಜೊತೆಗೆ ಕೆಲವು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಬರುತ್ತಿದ್ದಾರೆ.
ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ Celebrity League”
ಸೆಪ್ಟೆಂಬರ್ 15 ರಾತ್ರಿ 7 ಗಂಟೆಗೆ#SuvarnaCelebrityLeague #SCL #StarSuvarna #VinayGowda #ChandhuGowda #KarthikMahesh #Ninaad #Namratha #Tanisha #Abhigna #Hitesh #Rakshak #Priyanka pic.twitter.com/VHRvMMFzoE
— Star Suvarna (@StarSuvarna) September 8, 2024