ಕಾರ್ತಿಕ ಸೋಮವಾರ ಲಕ್ಷದೀಪೋತ್ಸವ: ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಟ ಅವಾಯ್ಡ್‌ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾರ್ತಿಕ ಮಾಸದ ಕೊನೆ ಸೋಮವಾರ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಬೇಗೂರಿನ ನಾಗಲಿಂಗೇಶ್ವರ ದೇವಾಲಯದಲ್ಲಿ ಇಂದು ಲಕ್ಷದೀಪೋತ್ಸವ ನಡೆಯಲಿದೆ.

ಹೀಗಾಗಿ ದೇವಾಲಯಕ್ಕೆ ಸುಮಾರು 80,000 ರಿಂದ 90,000 ಸಾವಿರ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದಾರೆ. ಇದರಿಂದ ಬೇಗೂರಿನ ರಸ್ತೆಗಳಲ್ಲಿ ಹೆಚ್ಚಿನ ವಾಹನಸಂಚಾರ ದಟ್ಟಣೆ ಉಂಟಾಗಲಿದೆ. ಈ ಸಂಬಂಧ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಬೇಗೂರು ರಸ್ತೆಯ ಪಿ.ಕೆ ಕಲ್ಯಾಣ ಮಂಟಪ ಜಂಕ್ಷನ್‌ನಿಂದ ಬೇಗೂರು ಕೊಪ್ಪ ರಸ್ತೆಯ ಏಕನಾ ಆಸ್ಪತ್ರೆ ಜಂಕ್ಷನ್​ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಣಿಪಾಲ್ ಕೌಂಟಿ ರಸ್ತೆಯ ಪಾಲ್ಕನ್ ಮಾರ್ಕೆಟ್ ಜಂಕ್ಷನ್‌ನಿಂದ ಬೇಗೂರು ನಾಗಲಿಂಗೇಶ್ವರ ದೇವಸ್ಥಾನದವರೆಗೆ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ಡಿಎಲ್‌ಎಫ್ ರಸ್ತೆಯ ಡಿಎಲ್‌ಎಫ್ ಜಂಕ್ಷನ್‌ನಿಂದ ಬೇಗೂರು ಕೆರೆಕಟ್ಟೆ ಜಂಕ್ಷನ್‌ವರೆಗೆ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!