ಯುಎಇ-ಸಿಂಗಾಪುರದಲ್ಲೂ ತೆರೆಕಾಣಲಿದೆ ಎಲ್ಲೆಡೆ ಸಂಚಲನ ಮೂಡಿಸಿದ ‘ದಿ ಕಾಶ್ಮೀರ್ ಫೈಲ್ಸ್’!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಅಮೋಘ ಪ್ರದರ್ಶನ ಕಂಡ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇದೀಗ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿಯನ್ನು ಪಡೆದುಕೊಂಡಿದೆ.
‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರ ಪಂಡಿತರ ನೈಜ ಘಟನೆಗಳ ಆಧಾರಿತ ಸಿನಿಮಾವಾಗಿದೆ.
ಇದೀಗ ಈ ಸಿನಿಮಾ ಯಾವುದೇ ಕಡಿತವಿಲ್ಲದೆ ಯುಎಇ ಮತ್ತು ಸಿಂಗಾಪುರದಲ್ಲಿ ಚಿತ್ರವು ಸೆನ್ಸಾರ್ ಕ್ಲಿಯರೆನ್ಸ್ ಪಡೆದುಕೊಂಡಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ ವಿವೇಕ್ ಅಗ್ನಿಹೋತ್ರಿ, ‘ಬಿಗ್ ವಿಕ್ಟರಿ: ಅಂತಿಮವಾಗಿ, ಯುಎಇಯಿಂದ ಸೆನ್ಸಾರ್ ಕ್ಲಿಯರೆನ್ಸ್ ಸಿಕ್ಕಿತು. ಯಾವುದೇ ಕಡಿತವಿಲ್ಲದೆ 15+ ರೇಟ್ ಮಾಡಲಾಗಿದೆ. ಏಪ್ರಿಲ್ 7 ರಂದು (ಗುರುವಾರ) ಸಿಂಗಾಪುರದಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ .
‘ಭಾರತದಲ್ಲಿ, ಕೆಲವರು ಇದನ್ನು ಇಸ್ಲಾಮೋಫೋಬಿಕ್ ಎಂದು ಕರೆಯುತ್ತಿದ್ದಾರೆ .ಆದರೆ ಇಸ್ಲಾಮಿಕ್ ದೇಶವು 4 ವಾರಗಳ ಪರಿಶೀಲನೆಯ ನಂತರ ಅದನ್ನು 0 ಕಡಿತಗಳೊಂದಿಗೆ 15+ ರೆಟಿಂಗ್ ನೀಡಿದೆ.ಪ್ರೇಕ್ಷಕರಿಗೆ ಭಾರತದಲ್ಲಿ ಇದು 18+ ರೇಟ್ ನೀಡಲಾಗಿದೆ’. ಎಂದರು
ವಿವೇಕ್ ರಂಜನ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಈ ಚಿತ್ರವು ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಭಾಷಾ ಸುಂಬ್ಲಿ ಮತ್ತು ಚಿನ್ಮಯ್ ಮಾಂಡ್ಲೇಕರ್ ಸೇರಿದಂತೆ ನಟರ ತಾರಾಬಳಗವನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!