ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ರಾಜ್ಯದಲ್ಲಿ ಅಲ್ಲದೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ.
ಅದ್ರಲ್ಲೂ ಪರದೇಶಗಳಿಂದಲೂ ಬೇಡಿಕೆ ಬಂದಿದೆ.ದುಬೈನಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಇದೇ ಕಾರಣಕ್ಕೆ ನಟ ದರ್ಶನ್ ದುಬೈಗೆ ತೆರಳಿದ್ದಾರೆ.
ದುಬೈಗೆ ತೆರಳಿರುವ ನಟ ದರ್ಶನ್ ಅಲ್ಲಿ ಅನಿವಾಸಿ ಕನ್ನಡಿಗರನ್ನು ಭೇಟಿ ನೀಡಿದ್ದು. ಸಿನಿಮಾದ ಪ್ರಚಾರ ಹಾಗೂ ವಿಶೇಷ ಪ್ರದರ್ಶನದಲ್ಲಿ ಭಾಗಿ ಆಗಲಿದ್ದಾರೆ.
‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆ ಆಗಿದ್ದು, ಕರ್ನಾಟಕದಲ್ಲಿ ಬಹಳ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.