CINE | ಮಗನ ಮುದ್ದಾದ ಫೋಟೋ ಹಂಚಿಕೊಂಡ ಕವಿತಾ-ಚಂದನ್‌ , ಸಖತ್‌ ಕ್ಯೂಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ಗೌಡ ಮುದ್ದು ಮಗನ ಆರೈಕೆಯಲ್ಲಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಮಗನ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಕವಿತಾ ಹಾಗೂ ಚಂದನ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.‌

ಹೊಸ ಜೀವನದ 6 ತಿಂಗಳುಗಳು, ಗುಂಡಪ್ಪ ಎಂದು ನಟಿ ಬರೆದುಕೊಂಡಿದ್ದಾರೆ. ಪೋಷಕರಾಗಲು ಅದೃಷ್ಟ ಮಾಡಿದ್ದೇವೆ. ನಿನ್ನೊಂದಿಗೆ ಅರ್ಧ ವರ್ಷ ಸಂತೋಷದಿಂದ ಕಳೆದಿರೋದು ಖುಷಿಯಿದೆ ಎಂದು ಕವಿತಾ ದಂಪತಿ ಮಗನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!