ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಕಾವೂರು ಬಿಜಿಎಸ್ ಎಜುಕೇಷನ್ ಸೆಂಟರ್ ( CBSE ) ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಬಾಲಮುಕುಂದ’ ಕೃಷ್ಣವೇಶ ಸ್ಪರ್ಧೆ ನಡೆಯಿತು.
ಈ ಕ್ಷಣ ಶಾಲೆಯ ಅಂಗಣದ ತುಂಬ ಮುದ್ದು ಕೃಷ್ಣರೇ ತುಂಬಿಕೊಂಡು ಮನಮುದಗೊಳಿಸಿದರು. ಬಿಜಿಎಸ್ ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಖುದ್ದು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.