March 12, 2026
Thursday, March 12, 2026
spot_img

ಪಾಕ್ ಸ್ಪಿನ್ನರ್‌ಗೆ ಮಣೆ ಹಾಕಿದ ಕಾವ್ಯ ಮಾರನ್: ಸೋಶಿಯಲ್ ಮೀಡಿಯಾದಲ್ಲಿ ‘Boycott SRH’ ಟ್ರೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಲೋಕದಲ್ಲಿ ಸದಾ ಸದ್ದು ಮಾಡುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್, ಈಗ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್ ಹರಾಜಿನಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಭಾರತೀಯ ಮೂಲದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದಿಲ್ಲ ಎಂಬ ಅಲಿಖಿತ ನಿಯಮವನ್ನು ಬದಿಗೊತ್ತಿ, ಕಾವ್ಯ ಮಾರನ್ ಒಡೆತನದ ‘ಸನ್‌ರೈಸರ್ಸ್ ಲೀಡ್ಸ್’ ತಂಡ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಬರೋಬ್ಬರಿ 2.34 ಕೋಟಿ ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಹರಾಜಿನ ವೇಳೆ ಅಬ್ರಾರ್ ಅಹ್ಮದ್‌ಗಾಗಿ ಸನ್‌ರೈಸರ್ಸ್ ಲೀಡ್ಸ್ ಮತ್ತು ಟ್ರೆಂಟ್ ರಾಕೆಟ್ಸ್ ನಡುವೆ ಭಾರಿ ಹಣಾಹಣಿ ನಡೆಯಿತು. ಪಟ್ಟು ಬಿಡದ ಕಾವ್ಯ ಮಾರನ್, ಕೋಟಿಗಳ ಸುರಿಮಳೆಗೈದು ಈ ‘ಮಿಸ್ಟರಿ ಸ್ಪಿನ್ನರ್’ ಅನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾವ್ಯ ಮಾರನ್ ಅವರ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

“ದೇಶ ಮೊದಲು, ಕ್ರಿಕೆಟ್ ಆಮೇಲೆ” ಎನ್ನುತ್ತಿರುವ ಅಭಿಮಾನಿಗಳು, ಮುಂಬರುವ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಮೂಲದ ಮಾಲೀಕತ್ವವಿದ್ದರೂ ಪಾಕ್ ಆಟಗಾರನಿಗೆ ಕೋಟಿ ಸುರಿದಿರುವುದು ಎಷ್ಟು ಸರಿ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !