October 18, 2026
Sunday, October 18, 2026
spot_img

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 1,88,037 ಹುದ್ದೆ ಖಾಲಿ: ಪರಿಷತ್ತಿಗೆ ಅಂಕಿಅಂಶ ನೀಡಿದ ಸಚಿವ ಬೋಸರಾಜ್


ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದು ಲಕ್ಷದ 88 ಸಾವಿರದ 37 ಹುದ್ದೆಗಳು ಖಾಲಿ ಇವೆ ಎಂದು ವಿಧಾನ ಪರಿಷತ್ತಿನ ಸಭಾನಾಯಕರೂ ಆಗಿರುವ ಸಚಿವ ಎನ್.ಎಸ್. ಬೋಸರಾಜ್ ತಿಳಿಸಿದರು.


ಬಿಜೆಪಿಯ ಸದಸ್ಯ ಶಶಿಲ್ ಜಿ ನಮೋಶಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಅವರ ಪರವಾಗಿ ಉತ್ತರಿಸಿದ ಸಭಾನಾಯಕರು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ 7 ಲಕ್ಷದ 76 ಸಾವಿರದ 414 ಹುದ್ದೆಗಳು ಮಂಜೂರಾಗಿದೆ. 4 ಲಕ್ಷದ 91 ಸಾವಿರದ 533 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರೂಪ್ ಸಿ – ಗ್ರೂಪ್ ಡಿ ವೃಂದದ ಹುದ್ದೆಗಳ ದತ್ತಾಂಶ ನಮೂದು ಸಹಾಯಕರು ಹಾಗೂ ವಾಹನ ಚಾಲಕರ ಒಟ್ಟು 96 ಸಾವಿರದ 844 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಒಟ್ಟು 5 ಲಕ್ಷದ 88 ಸಾವಿರದ 377 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಕಳೆದ ಮೂರು ವರ್ಷಗಳಲ್ಲಿ 8 ಸಾವಿರದ 157 ಹುದ್ದೆಗಳಿಗೆ ನೇಮಕಾತಿ ಪೂರ್ಣಗೊಳಿಸಲಾಗಿದೆ. 3 ಸಾವಿರದ 81 ಹುದ್ದೆಗಳ ನೇಮಕಾತಿ ಪ್ರಗತಿಯಲ್ಲಿದೆ. 56 ಸಾವಿರದ 432 ಹುದ್ದೆಗಳಿಗೆ 30 ದಿನಗಳ ಒಳಗಾಗಿ ನೇಮಕಾತಿ ಆರಂಭಿಸಲು ಎಲ್ಲ ಇಲಾಖೆ ಹಾಗೂ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೂ ಒಂದು ಬಾರಿ ಗೆ 5 ವರ್ಷಗಳ ವಯೋಮಿತಿಯನ್ನು ಸಡಿಲಗೊಳಿಸಿರುವುದಾಗಿ ತಿಳಿಸಿದರು.

Must Read