ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯಕ್ಕೆ ಕಾವಾಲಾ ಹಾಡಿನಿಂದ ಸೆನ್ಸೇಷನ್ ಸೃಷ್ಟಿ ಮಾಡಿರುವ ತಮನ್ನಾಗೆ ಎಲ್ಲಿಲ್ಲದ ಡಿಮ್ಯಾಂಡ್ ಸಿಕ್ಕಿದೆ. ತಮನ್ನಾ ಒಂದು ಡ್ಯಾನ್ಸ್ ಮಾಡಿದ್ರೆ ಸಿನಿಮಾ ಹಿಟ್ ಅನ್ನೋ ಮಟ್ಟಕ್ಕೆ ತಮನ್ನಾ ಪ್ರಸಿದ್ಧಿ ಹೊಂದಿದ್ದಾರೆ.
ಇದೀಗ ಕನ್ನಡದ ಬಹುನಿರೀಕ್ಷಿತ ಸಿನಿಮಾ ಸಂಜು ವೆಡ್ಸ್ ಗೀತಾ-೨ ಸಿನಿಮಾದಲ್ಲಿ ಕಾವಾಲಾ ಬ್ಯೂಟಿ ತಮನ್ನಾ ಡ್ಯಾನ್ಸ್ ಮಾಡಲಿದ್ದಾರೆ. ಸ್ಪೆಷಲ್ ಹಾಡಿಗೆ ತಮನ್ನಾ ಡ್ಯಾನ್ಸ್ ಮಾಡಲಿದ್ದು, ಸಿನಿಮಾ ಕಳೆ ಹೆಚ್ಚಿದೆ.
ಈ ಸಿನಿಮಾದಲ್ಲಿ ರಮ್ಯಾ ಹೀರೋಯಿನ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸಿನಿಮಾಗೆ ರಚಿತಾ ರಾಮ್ ನಾಯಕಿ ಎಂದು ಹೇಳಲಾಗಿದೆ. ನಾಗಶೇಖರ್ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದು, ತಮನ್ನಾ ಬರೋದು ಬಹುತೇಕ ಫಿಕ್ಸ್ ಆಗಿದೆ.