ಹೊಸದಿಗಂತ ವರದಿ,ಕಲಬುರಗಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ಸ್ಪರ್ಧಾತ್ಮಕ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಅರ್ಜಿ ಕೊನೆಗೂ ತಿರಸ್ಕರಿಸಿ ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೂರು ಪ್ರಕರಣಗಳಲ್ಲಿ ಆರ್.ಡಿ.ಪಾಟೀಲ್ ಜಾಮೀನು ಅರ್ಜಿ ತಿರಸ್ಕಾರ ಆಗಿದ್ದು, ನ್ಯಾಯಮೂರ್ತಿ ಮೋಹನ್ ಬಾಡಗಂಡಿ ಅವರಿಂದ ಅರ್ಜಿ ತಿರಸ್ಕಾರವಾಗಿದೆ.ಆರ್.ಡಿ.ಪಾಟೀಲ್,ಗೆ ಜಾಮೀನು ಕೋರಿ ಬಿ.ಶ್ಯಾಮಸುಂದರ್ ವಾದ ಮಂಡಿಸಿದ್ದರು.
ಸರ್ಕಾರಿ ಅಭಿಯೋಜಕರಾದ ನರಸಿಂಹಲು ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.ಕಲಬುರಗಿಯ ವಿವಿ ಠಾಣೆ, ಅಶೋಕ್ ನಗರ ಪೊಲೀಸ್ ಠಾಣೆ, ಅಫಜಲಪುರಿನ ಠಾಣೆಯಲ್ಲಿ ಮೂರು ಪ್ರಕರಣಗಳು ಆರ್.ಡಿ.ಪಾಟೀಲ್ ವಿರುದ್ಧ ದಾಖಲಾಗಿದ್ದವು.