ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಬೇಗನೆ ತಯಾರಿಸಬಹುದಾದ ತಿಂಡಿಯನ್ನೇ ಹೆಚ್ಚು ಜನ ಮಾಡೋದು. ಇನ್ನು ಕೆಲವರು ರಾತ್ರಿ ವೇಳೆ ತರಕಾರಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಡುತ್ತಾರೆ. ಕೆಲವರು ರಾತ್ರಿ ಮತ್ತು ಮರುದಿನಕ್ಕೆ ಬೇಕಾಗುವಷ್ಟು ಚಪಾತಿ ಮತ್ತು ಪೂರಿ ಹಿಟ್ಟನ್ನು ಬೆರೆಸಿ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದನ್ನು ಮಾಡೋದು ಆರೋಗ್ಯಕ್ಕೆ ಒಳ್ಳೆಯದಾ ಎಂದು ಎಂದಾದರೂ ಯೋಚಿಸಿದ್ದೀರಾ?
ಫ್ರಿಡ್ಜ್ ನಿಂದ ಚಪಾತಿ, ಪೂರಿ ಹಿಟ್ಟು ತೆಗೆದುಕೊಂಡು ತಿಂಡಿ ಮಾಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯದಲ್ಲ. ಹಿಟ್ಟನ್ನು ಬೆರೆಸಿದ ನಂತರ, ಅದನ್ನು ಎರಡು ಗಂಟೆಗಳ ಒಳಗೆ ಬಳಸಬೇಕು. ಉಳಿದ ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟರೆ ಅದರಲ್ಲಿ ಹಲವು ರಾಸಾಯನಿಕ ಬದಲಾವಣೆಗಳು ನಡೆದು ಹಿಟ್ಟಿನ ಮೇಲೆ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯುತ್ತದೆ. ಸಂಗ್ರಹಿಸಿಟ್ಟ ಹಿಟ್ಟನ್ನು ಫ್ರಿಡ್ಜ್‌ನಿಂದ ತೆಗೆದಾಗ ಕಪ್ಪು ಬಣ್ಣದ ಪದರ ಗೋಚರಿಸುತ್ತದೆ.ಇದರರ್ಥ ಸೂಕ್ಷ್ಮಜೀವಿಗಳು ಈಗಾಗಲೇ ಅದರ ಮೇಲೆ ಹುಟ್ಟಿವೆ ಎಂದು ಗುರುತಿಸಬೇಕು. ಇಂತಹ ಹಿಟ್ಟಿನೊಂದಿಗೆ ಚಪಾತಿ, ಪೂರಿ ತಿಂದರೆ ಹೊಟ್ಟೆ ಉಬ್ಬರ, ಅಜೀರ್ಣ, ಹೊಟ್ಟೆನೋವು ಹಾಗೂ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬರುತ್ತವೆ.
ಗೋಧಿ ಹಿಟ್ಟಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶಗಳಿವೆ. ಫ್ರಿಡ್ಜ್‌ನಲ್ಲಿ ಇಟ್ಟರೆ ಹಾಳಾಗುವ ಸಾಧ್ಯತೆ ಇದೆ. ಇದಲ್ಲದೆ, ಕಲಸಿ ಎರಡು ಮೂರು ದಿನ ಇಡುವ ಆಹಾರವನ್ನು ಸೇವಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇಂತಹ ಹಿಟ್ಟಿನ ಆಹಾರ ಸೇವಿಸಿದರೆ ಮಧುಮೇಹ ಬರುವ ಅಪಾಯವಿದೆ. ಅದಕ್ಕಾಗಿಯೇ ಹಿಟ್ಟನ್ನು ಬೆರೆಸಿದ ಎರಡು ಗಂಟೆಗಳ ಒಳಗೆ ಬಳಸಬೇಕು. ಕೆಲವರು ಚಪಾತಿಗಳು ಮೃದುವಾಗಲು ಹಾಲು, ಮೊಸರು ಸೇರಿಸುತ್ತಾರೆ ಹೀಗೆ ಬೆರೆಸಿದ ಹಿಟ್ಟನ್ನು ಮರುದಿನ ಸಂಗ್ರಹಿಸಬಾರದು.