Friday, January 9, 2026

ಕೊಟ್ಟ ಮಾತು ಉಳಿಸಿಕೊಳ್ಳುವುದೇ ಜಗತ್ತಿನ ದೊಡ್ಡ ಶಕ್ತಿ: ಡಿ.ಕೆ.ಶಿವಕುಮಾರ್ ಮಾರ್ಮಿಕ ನುಡಿ!

ಹೊಸದಿಗಂತ ಹಾವೇರಿ:

“ನುಡಿದಂತೆ ನಡೆಯುವುದೇ ಜಗತ್ತಿನ ಅತಿ ದೊಡ್ಡ ಶಕ್ತಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾವೇರಿಯಲ್ಲಿ ಪುನರುಚ್ಚರಿಸಿದ್ದಾರೆ.

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಹಿಮ್ಸ್) ಆವರಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘Word Power is a World Power’ ಎಂಬ ತಮ್ಮ ಹಳೆಯ ಹೇಳಿಕೆಯನ್ನು ನೆನಪಿಸಿದರು. ವಿಶೇಷವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದ ದಿನದಂದೇ ಶಿವಕುಮಾರ್ ಅವರು ಈ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

“ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬುದು ನನ್ನ ದೃಢ ನಂಬಿಕೆ. ರಾಜಕೀಯದಲ್ಲಿ ಅಥವಾ ಜೀವನದಲ್ಲಿ ನಾವು ಆಡುವ ಮಾತಿಗೆ ಬೆಲೆ ಇರಬೇಕು. ಆ ಮಾತನ್ನು ಉಳಿಸಿಕೊಳ್ಳುವುದೇ ನಮಗೆ ನಿಜವಾದ ಶಕ್ತಿ ನೀಡುತ್ತದೆ,” ಎಂದು ಅವರು ಮಾರ್ಮಿಕವಾಗಿ ನುಡಿದರು. ಡಿಕೆಶಿ ಅವರ ಈ ಮಾತಿಗೆ ಸಭೆಯಲ್ಲಿದ್ದ ಸಾರ್ವಜನಿಕರು ಸಿಳ್ಳೆ ಮತ್ತು ಚಪ್ಪಾಳೆಗಳ ಮೂಲಕ ಭಾರಿ ಬೆಂಬಲ ಸೂಚಿಸಿದರು.

error: Content is protected !!