CINEMA| RRR ಖಾತೆಗೆ ಮತ್ತೊಂದು ಅವಾರ್ಡ್:‌’ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್ಸ್’ ಪಡೆದ ʻನಾಟು..ನಾಟುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್’ ಬೃಹತ್ ಮಲ್ಟಿಸ್ಟಾರರ್ ಚಿತ್ರ ಹಾಲಿವುಡ್ ಪ್ರೇಕ್ಷಕರಿಗೆ ಮತ್ತು ಚಲನಚಿತ್ರ ನಿರ್ದೇಶಕರ ಮೇಲೆ ಬಹಳ ಪ್ರಭಾವಶಾಲಿಯಾಗಿದೆ. ಕೇವಲ ಜನಪ್ರಿಯವಷ್ಟೆ ಅಲ್ಲ ಅಂತರರಾಷ್ಟ್ರೀಯ ಪ್ರಶಸ್ತಿ ನೀಡುವ ಸ್ಥಳಗಳಲ್ಲಿ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾ ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದು ಗೊತ್ತೇ ಇದೆ.  ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಕೂಡ ತನ್ನ ಖಾತೆಗೆ ಸೇರಿಸಿದೆ.

ಇದೀಗ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ ‘ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್’ ಕೂಡ ಪಡೆದುಕೊಂಡಿದೆ. ಎಂ.ಎಂ.ಕೀರವಾಣಿ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಎಂಬ ಪ್ರಶಸ್ತಿ ಪಡೆದಿದ್ದಾರೆ.  ಲಾಸ್ ಏಂಜಲೀಸ್‌ನಲ್ಲಿ ಕೀರವಾಣಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಆರ್‌ಆರ್‌ಆರ್ ತಂಡ ಟ್ವಿಟರ್ ಮೂಲಕ ಸಂಬಂಧಿತ ಫೋಟೋಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ಕೀರವಾಣಿಯನ್ನು ಅಭಿನಂದಿಸಿದ್ದಾರೆ. ಈ ಪ್ರಶಸ್ತಿಯೊಂದಿಗೆ ಕೀರವಾಣಿ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಸದ್ಯ ಲಾಸ್ ಏಂಜಲೀಸ್‌ನಲ್ಲಿರುವ ಚಿತ್ರತಂಡ ಆಸ್ಕರ್ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಚಾರ ನಡೆಸುತ್ತಿದೆ. ಈ ಕ್ರಮದಲ್ಲಿ ಹಾಲಿವುಡ್ ಸಿಟಿಯಲ್ಲಿ ಮತದಾರರೊಂದಿಗೆ ಚಿಟ್ ಚಾಟ್ ನಡೆಸಿ ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡಿ ಸದ್ದು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!