ಕೀರ್ತಿ ಸುರೇಶ್ ಮದುವೆಯಾಗುತ್ತಿಲ್ಲ, ಅದು ಸುಳ್ಳು ಸುದ್ದಿ: ತಂದೆ ಸುರೇಶ್ ಕುಮಾರ್ ಸ್ಪಷ್ಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಯವಿಟ್ಟು ನನ್ನ ಮಗಳ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮದುವೆ ನಿಶ್ಚಯವಾದರೆ ಮೊದಲು ನಿಮಗೆ ಹೇಳಲಾಗುವುದು ಎಂದು ಕೀರ್ತಿ ಸುರೇಶ್​ ತಂದೆ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್​, ಫರ್ಹಾನ್ ಬಿನ್ ಲಿಯಾಕತ್ ಎಂಬ ಯುವಕನ ಜೊತೆ ಫೋಟೋ ಹಂಚಿಕೊಂಡಿದ್ದು, ಭಾರೀ ವೈರಲ್​ ಆಗಿತ್ತು.

ಕೀರ್ತಿ ಸುರೇಶ್​ ಅವರನ್ನು ಪ್ರೀತಿಸುತ್ತಿದ್ದು, ಶೀಘ್ರ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಆದರೆ ಇದ್ಯಾವುದಕ್ಕೂ ಇದುವರೆಗೆ ನಟಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದೀಗ ​ ಅವರ ತಂದೆ ಖ್ಯಾತ ಚಲನಚಿತ್ರ ನಿರ್ಮಾಪಕ ಜಿ. ಸುರೇಶ್​ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ. ಕೀರ್ತಿ ಸುರೇಶ್, ಫರ್ಹಾನ್ ಬಿನ್ ಲಿಯಾಕತ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ, ವರದಿಗಳು ಸುಳ್ಳು ಎಂದು ಹೇಳಿದ್ದಾರೆ.

ಸದ್ಯ ವೈರಲ್​​ ಆಗುತ್ತಿರುವ ಹುಡುಗನ ಬಗ್ಗೆ ನನಗೆ ತಿಳಿದಿದೆ. ಅವನು ಹತ್ತಿರದ ಕುಟುಂಬ ಸ್ನೇಹಿತ. ಫರ್ಹಾನ್ ಹುಟ್ಟುಹಬ್ಬದಂದು, ಕೀರ್ತಿ ಕೆಲವು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನಷ್ಟೇ ಕೋರಿದ್ದಳು. ಅದನ್ನು ತಮಿಳು ಆನ್‌ಲೈನ್ ನಿಯತಕಾಲಿಕೆ ತೆಗೆದುಕೊಂಡಿತ್ತು. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಇದರ ಬಗ್ಗೆ ವಿಚಾರಿಸಲು ಅನೇಕರು ಕರೆ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!