ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯುಸಿ ನಾಯಕಿಯಾಗಿದ್ದಾರೆ. ದಸರಾ ಚಿತ್ರದ ಮೂಲಕ ಸೂಪರ್ ಹಿಟ್ ಗಳಿಸಿದ ಕೀರ್ತಿ ಇತ್ತೀಚೆಗೆ ಭೋಲಾ ಶಂಕರ್ ಚಿತ್ರದಲ್ಲಿ ಚಿರಂಜೀವಿ ಅವರ ಸಹೋದರಿಯಾಗಿ ನಟಿಸಿರುವ ಈಕೆಯ ಕೈಯಲ್ಲಿ ಸದ್ಯ ಹಲವಾರು ತಮಿಳು ಚಿತ್ರಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುವ ಈ ಚೆಲುವೆ, ಬೀಚ್‌ನಲ್ಲಿ ಖದರ್ ಆಗಿ ಜೀಪ್ ಓಡಿಸುತ್ತಿರುವ ವಿಡಿಯೋ ಟ್ರೆಂಡ್ ಸೃಷ್ಟಿಸುತ್ತಿದೆ.
ಚೆನ್ನೈನ ಬೀಚ್‌ನಲ್ಲಿ ಮಹೀಂದ್ರ ಥಾರ್ ಚಾಲನೆ ಮಾಡುತ್ತಿರುವ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್ ಸ್ಯಾಂಡ್‌ನಲ್ಲಿ ಚೇಸ್ ಸೀನ್ ಹೀರೋಗಳಂತೆ ಸ್ಟೈಲಿಶ್ ಆಗಿ ಜೀಪ್ ಓಡಿಸಿದ್ದಾರೆ ಕೀರ್ತಿ ಸುರೇಶ್.
ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಭಾನುವಾರ ಚೆನ್ನೈ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಭಿಮಾನಿಗಳು ಸೂಪರ್ ಎಂಬ ಕಮೆಂಟ್ ಮಾಡುತ್ತಿದ್ದಾರೆ.