ಭಗತ್ ಸಿಂಗ್, ಡಾ.ಬಿ.ಆರ್.ಅಂಬೇಡ್ಕರ್ ನಡುವೆ ಕೇಜ್ರಿವಾಲ್ ಫೋಟೋ: ನೆಟ್ಟಿಗರು ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೆಡೆ ದಿಲ್ಲಿ ಸಿಎಂ ಕೇಜ್ರಿವಾಲ್ ಜೈಲಿನಿಂದಲೇ ಶಾಸಕರಿಗೆ ಪತ್ರ ಬರೆದು ಸುದ್ದಿ ಮಾಡುತ್ತಿದ್ದರೆ ಇನ್ನೊಂದೆಡೆ ಆಪ್ ಇದನ್ನು ಸುದ್ದಿ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕೇಜ್ರಿವಾಲ್ ಶಾಸಕರಿಗೆ ಬರೆದಿರುವ ಪತ್ರವನ್ನು ಪತ್ನಿ ಸುನೀತಾ ಕೇಜ್ರಿವಾಲ್ ಗುರುವಾರ ಡಿಜಿಟಲ್ ಬ್ರೀಫಿಂಗ್ ನಡೆಸಿದ ವೇಳೆ ಈ ವೇಳೆ ಅವರ ಹಿಂದೆ ಗೋಡೆಯಲ್ಲಿ ಭಗತ್ ಸಿಂಗ್, ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ನಡುವೆ ಜೈಲಿನಲ್ಲಿರುವಂತೆ ಕೇಜ್ರಿವಾಲ್ ಪೋಟೋ ಅಳವಡಿಸಿಕೊಂಡಿದ್ದು, ಇದನ್ನು ಹಲವರು ಪ್ರಶ್ನೆ ಮಾಡಿದ್ದಾರೆ.

ಇಬ್ಬರು ಐಕಾನ್‌ಗಳ ನಡುವೆ ಕೇಜ್ರವಾಲ್ ಫೋಟೋ ಇರಿಸಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದರೆ, ಕೆಲವರು ಕೇಜ್ರಿವಾಲ್ ಅವರನ್ನ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲು ಪಕ್ಷವು ಉದ್ದೇಶಪೂರ್ವಕವಾಗಿ ಅದನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ!

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!