ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಹೆಸರು ಕೈಬಿಡಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ದೂರುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿಯಲ್ಲಿಈ ಬಗ್ಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ. ಅವರು ಕನ್ನಡದ ಸ್ವತ್ತು. ನಾಳೆಯ ಸರ್ಕಾರದ ಕಾರ್ಯಕ್ರಮದಲ್ಲಿ ದೇವೇಗೌಡರು, ನನ್ನ ಹೆಸರು ಹಾಕಿಲ್ಲ ಎಂದು ಹೇಳಿದರು, ನಾನು ಈ ವಿಚಾರಕ್ಕೆ ಬಹಳ ಮಹತ್ವ ಕೊಡುವುದಿಲ್ಲ. ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರಮದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ಹೇಳುವುದಿಲ್ಲ ಎಂದರು.
ಕೆಂಪೇಗೌಡರ ಜಯಂತಿಯನ್ನು ಬೇರೆಬೇರೆ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಸರ್ಕಾರ ಒಂದು ರೀತಿಯಲ್ಲಿ ಆಚರಣೆ ಮಾಡಿದರೆ, ದೇವನಹಳ್ಳಿ ಭಾಗದಲ್ಲಿ ಮನೆ ಮನೇಲೂ ಫೋಟೋ ಇಟ್ಟು ಪೂಜೆ ಮಾಡಿ ಆಚರಣೆ ಮಾಡುತ್ತಾರೆ. ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣರಾದವರು ಕೆಂಪೇಗೌಡರು ಎಂದು ಹೇಳಿದರು.

ಕೆಂಪೇಗೌಡ ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಇರುವ ಕೆರೆಗಳನ್ನು ಕಾಪಾಡುವ ಕೆಲಸ ಮಾಡಬೇಕಿದೆ. ಮೇಕೆದಾಟು ಕಟ್ಟಬೇಕು, ಕುಡಿಯೋ ನೀರು ಅಂತೆಲ್ಲ ಹೇಳುತ್ತಾರೆ. ಈಗಲೇ ಕುಡಿಯೋಕೆ ನೀರಿಲ್ಲದೆ ಕಷ್ಟದ ಪರಿಸ್ಥಿತಿ ಇದೆ. ಮುಂದಿನ 15 ವರ್ಷ ಆದಮೇಲೆ ಏನಾಗುತ್ತೋ ಗೊತ್ತಿಲ್ಲ. ಸರ್ಕಾರ ನ್ಯಾಯಯುತವಾಗಿ ಜಯಂತಿ ಆಚರಣೆ ಮಾಡೋದಾದರೆ ಆ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಿ ಮಳೆ ನೀರನ್ನು ಸರಿಯಾಗಿ ಬಳಸಿಕೊಳ್ಳುವತ್ತ ಚಿಂತನೆ ಮಾಡಲಿ. ಇಷ್ಟು ಮಾಡಿದರೆ ನಾನು ಸರ್ಕಾರಕ್ಕೆ ಸಲ್ಯೂಟ್ ಮಾಡುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!