ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತ್ರಿಶೂರ್ ನಲ್ಲಿರುವ ಕರುವನ್ನೂರ್ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು, ಜೊತೆಗೆ 300 ಕೋಟಿ ರೂ.ಗಳ ಬ್ಯಾಂಕ್ ಹಗರಣದ ಎಲ್ಲಾ ಆರೋಪಿಗಳ ಮನೆಗಳ ಮೇಲೂ ದಾಳಿ ನಡೆಸಿದೆ.
ಠೇವಣಿದಾರರು ಸಿಪಿಐಎಂ ಬೆಂಬಲಿತ ಬ್ಯಾಂಕಿನ ಕಾರ್ಯನಿರ್ವಹಣೆಯ ವಿರುದ್ಧ ದೂರು ನೀಡಿದ ಮತ್ತು ತಮ್ಮ ಹೂಡಿಕೆಗಳ ಮೇಲೆ ಪ್ರತಿಫಲವನ್ನು ಕೋರಿರುವ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದು, ರಾಜ್ಯ ಏಜೆನ್ಸಿಗಳು ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆರೋಪಿಸಿದೆ.
ಜುಲೈ 2021 ರಲ್ಲಿ ಸಾಲ ಹಗರಣವು ವರದಿಯಾಗಿದ್ದು, ನಂತರ ಆರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.