April 9, 2026
Thursday, April 9, 2026
spot_img

ಕೇರಳ ಆಯಿತು ‘ಕೇರಳಂ’…ದೆಹಲಿ ಆಗುತ್ತಾ ಇಂದ್ರಪ್ರಸ್ಥ?: ಬಿಜೆಪಿ ಸಂಸದನಿಂದ ಅಮಿತ್ ಶಾ ಗೆ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದ ಬೆನ್ನಲ್ಲೇ ದೆಹಲಿ ಹೆಸರು ಬದಲಾವಣೆಗೆ ಒತ್ತಾಯ ಕೇಳಿಬರುತ್ತಿದೆ.

ಈ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ದೆಹಲಿಯ ಚಾಂದಿನಿಚೌಕ್‌ನ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಪತ್ರ ಬರೆದಿದ್ದು, ದೆಹಲಿ ಎಂಬ ಹೆಸರ ಬದಲಿಗೆ ಇಂದ್ರಪ್ರಸ್ಥ ನಗರ ಇಡುವಂತೆ ಕೇಳಿಕೊಂಡಿದ್ದಾರೆ.

ಇಂದ್ರಪ್ರಸ್ಥ ನಗರ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸ್ಥಾನವು ಮಾನವೀಯತೆಯ ಅತ್ಯಂತ ಹಳೆಯ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಒಂದರ ಪರಂಪರೆಯ ಮೇಲೆ ನಿಂತಿದೆ ಎಂಬುದನ್ನು ಸಂಕೇತಿಸುತ್ತದೆ ಎಂದಿದ್ದಾರೆ.

ಅದೇ ರೀತಿ ಹಳೆ ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವಂತೆ ಉಲ್ಲೇಖಿಸಿದ್ದಾರೆ.

ಮಹಾಭಾರತದಲ್ಲಿ ಪಾಂಡವರು ಹಸ್ತಿನಾಪುರದಿಂದ ಬೇರ್ಪಟ್ಟ ಬಳಿಕ ಇಂದ್ರಪ್ರಸ್ಥವು ಪಾಂಡವರ ರಾಜಧಾನಿಯಾಗಿತ್ತು. ದ್ರೌಪದಿಯ ಸ್ವಯಂವರದ ನಂತರ ಧೃತರಾಷ್ಟ್ರನು ಪ್ರಾಂಡವರಿಗೆ ನೀಡಿದ್ದ `ಖಾಂಡವಪ್ರಸ್ಥ’ ಎಂಬ ಪಾಳುಭೂಮಿಯನ್ನು ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಮಾಯಾನಗರಿಯಾಗಿ ನಿರ್ಮಿಸಲಾಗಿತ್ತು. ಅದುವೇ ದೆಹಲಿಯ ಹಳೇಭಾಗ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !