ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದ್ದು, ಇತ್ತ ಈ ಮಸೂದೆಯನ್ನು ವಿರೋಧಿಸುವ ವಿರೋಧ ಪಕ್ಷಗಳು ನಾಳೆ ಸದನದಲ್ಲಿ ಗಲಭೆ ಸೃಷ್ಟಿಸುವ ಸಾಧ್ಯತೆಯದೆ. ಇದರ ನಡುವೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ (Kerala Catholic Bishops’ Association)ವಕ್ಫ್ ತಿದ್ದುಪಡಿ (Waqf) ಮಸೂದೆಗೆ ಬೆಂಬಲ ನೀಡಿದೆ.
ಜನ ಪ್ರತಿನಿಧಿಗಳು ತಿದ್ದುಪಡಿಯ ಪರವಾಗಿ ಮತ ಚಲಾಯಿಸಬೇಕು. ಇದರಿಂದ ವಕ್ಫ್ ಮಂಡಳಿಯ ಭೂಮಿಯ ಮೇಲೆ ಹಕ್ಕು ಚಲಾಯಿಸುವುದನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.
ವಕ್ಫ್ನ ಆಸ್ತಿಗಳನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಈ ಮಸೂದೆಯಿಂದ ಸಾಮಾನ್ಯ ಜನರ ಕಲ್ಯಾಣವಾಗುತ್ತದೆ. ಅದಲ್ಲದೇ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿದ ಕೆಲವು ಪ್ರಭಾವಿ ಜನರಿದ್ದಾರೆ. ವಿಷಯಗಳನ್ನು ಟೀಕಿಸುವುದು ಪ್ರತಿಯೊಬ್ಬರ ಹಕ್ಕು, ಆದರೆ ಟೀಕೆಯಲ್ಲಿ ಕೆಲವು ವಿಷಯಗಳು ಇರಬೇಕು ಎಂದಿದೆ.
ವಿಪಕ್ಷಗಳು ಹಾಗೂ ಮುಸ್ಲಿಂ ಸಮುದಾಯದ ತೀವ್ರ ವಿರೋಧದ ನಡುವೆ ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದ್ದು, ವಕ್ಫ್ ಬಿಲ್ ಮೇಲಿನ ವಿಸ್ತೃತ ಚರ್ಚೆಗಾಗಿ ಬರೋಬ್ಬರಿ 8 ಗಂಟೆ ಸಮಯ ಮೀಸಲು ಇಡಲಾಗಿದೆ.